ಫ್ರಾನ್ಸ್ನಲ್ಲಿ ದಿಢೀರ್ ನೆರೆ: ಕನಿಷ್ಠ 6 ಸಾವು
ಪ್ಯಾರಿಸ್, ಅ. 15: ನೈರುತ್ಯ ಫ್ರಾನ್ಸ್ನ ಆಡ್ ಜಿಲ್ಲೆಯಲ್ಲಿ ರವಿವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಸರಕಾರ ಸೋಮವಾರ ತಿಳಿಸಿದೆ.
ಸಾಮಾನ್ಯವಾಗಿ ಹಲವಾರು ತಿಂಗಳುಗಳ ಅವಧಿಯಲ್ಲಿ ಬೀಳುವ ಮಳೆ ಒಂದೇ ರಾತ್ರಿ ಬಿದ್ದ ಹಿನ್ನೆಲೆಯಲ್ಲಿ ದಿಢೀರ್ ಪ್ರವಾಹ ತಲೆದೋರಿದೆ.
ಮನೆಗಳ ಮೇಲ್ಛಾವಣಿಯಲ್ಲಿರುವ ಜನರನ್ನು ರಕ್ಷಿಸಲು ಆರು ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ, ಆದರೆ, ಕೆಟ್ಟ ಹವಾಮಾನ ರಕ್ಷಣಾ ಕಾರ್ಯಾಚರಣೆಗೆ ತಡೆಯಾಗಿದೆ ಎಂದು ಸ್ಥಳೀಯ ಸರಕಾರದ ಅಧಿಕಾರಿಯೊಬ್ಬರು ತಿಳಿಸಿದರು ಎಂದು ಬಿಎಫ್ಎಂ ಟಿವಿ ವರದಿ ಮಾಡಿದೆ.
ಸುಮಾರು 250 ಅಗ್ನಿಶಾಮಕ ಸಿಬ್ಬಂದಿ ಮತ್ತು 100 ಪೊಲೀಸರನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ.
Next Story