ರೋಶನ್ ಮೆಲ್ಕಿ ಸಿಕ್ವೇರಾ ಕಿಟಾಳ್ ಪುರಸ್ಕಾರಕ್ಕೆ ಆಯ್ಕೆ

ಮಂಗಳೂರು, ಅ.16: ರೋಶು, ಬಜ್ಪೆ ಕಾವ್ಯನಾಮದಿಂದಲೇ ಕೊಂಕಣಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಪ್ರತಿಭಾವಂತ ಯುವ ಕವಿ, ಕಥೆಗಾರ, ಹಾಸ್ಯ ಲೇಖಕ ರೋಶನ್ ಮೆಲ್ಕಿ ಸಿಕ್ವೇರಾ ಇವರು 2017 ನೇ ಸಾಲಿನ ಲಿಯೊ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ತನ್ನ ಹದಿನಾರನೇ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಅವರು, ಮೈಸೂರು ವಿಶ್ವವಿದ್ಯಾಲಯದ ಎಂಕಾಂ ಪದವೀಧರರು. ಹಾಸ್ಯಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವರು ಹಾಸ್ಯಎಟ್ಯಾಕ್ (2015) ಮತ್ತು ಓಪನ್ ಹಾಸ್ಯ ಸರ್ಜರಿ (2017) ಎಂಬ ಎರಡು ಹಾಸ್ಯಲೇಖನಗಳ ಸಂಗ್ರಹಗಳನ್ನು ಹೊರತಂದಿದ್ದಾರೆ.
ಜಿಲ್ಲಾ / ರಾಜ್ಯಮಟ್ಟದ ಕವಿಗೋಷ್ಟಿಗಳಲ್ಲಿ ಕೊಂಕಣಿಯನ್ನು ಪ್ರತಿನಿಧಿಸಿರುವುದಲ್ಲದೇ, ಕನ್ನಡ ಮತ್ತು ಹಿಂದೀ ಭಾಷೆಯಲ್ಲೂ ಕಥೆ, ಲೇಖನ, ಕವಿತೆಗಳನ್ನು ಬರೆಯುತ್ತಿದ್ದಾರೆ.ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟಗೊಂಡಿವೆ. ಅನುವಾದಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡುತ್ತಿರುವ ರೋಶು, ಇತ್ತೀಚೆಗೆ ಲಂಕೇಶರ ನಾಟಕ ಗ್ರಹಸ್ಥಾಶ್ರಮವನು ್ನಕೊಂಕಣಿಗೆ ಭಾಷಾಂತರಿಸಿ ಈ ನಾಟಕ ಈಗಾಗಲೇ ಸಾಕಷ್ಟು ಪ್ರದರ್ಶನಗಳನ್ನು ಕಂಡಿದೆ.
ಆಕಾಶವಾಣಿ, ಕೊಂಕಣಿಯ ಬಹುತೇಕ ನಿಯತಕಾಲಿಕಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಅವರ ಬರಹಳು ಸರಾಗವಾಗಿ ಪ್ರಕಟವಾಗುತ್ತಿವೆ.
ಕೊಂಕಣಿ ಸಾಹಿತ್ಯದಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವಉದ್ದೇಶದಿಂದ 2012ರಿಂದ ಕೊಂಕಣಿಯ ಖ್ಯಾತ ಕವಿ, ವಿಮರ್ಶಕಎಚ್ಚೆಮ್, ಪೆರ್ನಾಲ್ ಸಂಪಾದಕರಾಗಿರುವ ಕಿಟಾಳ್ www.kittall.com ಸಾಹಿತ್ಯಅಂತರ್ಜಾಲ ಪತ್ರಿಕೆಯುವ ಪುರಸ್ಕಾರವನ್ನು ನೀಡುತ್ತಾ ಬಂದಿದ್ದು, ಅಬುದಾಬಿಯಲ್ಲಿ ನೆಲೆಸಿರುವ ಅನಿವಾಸಿ ಉದ್ಯಮಿ ಲಿಯೋರೊಡ್ರಿಗಸ್ ತಮ್ಮಕುಟುಂಬದ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.
ಪ್ರಶಸ್ತಿ 25,000 ರೂ. ನಗದು ಮತ್ತು ಸನ್ಮಾನ ಪತ್ರವನ್ನು ಒಳಗೊಂಡಿದೆ. ನವಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.







