ಹನಿ ನೀರಾವರಿ, ಸ್ಪಿಂಕ್ಲರ್ ನೀರಾವರಿಗೆ ಸಹಾಯಧನ
ಮಂಗಳೂರು, ಅ.16: ರಬ್ಬರ್, ಕಾಫಿ ಹೊರತು ಪಡಿಸಿ ಇತರೆ ತೊಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಅಥವಾ ಸ್ಪಿಂಕ್ಲರ್ ನೀರಾವರಿ ಅಳವಡಿಸಲು ಎಲ್ಲಾ ವರ್ಗದ ರೈತರಿಗೆ ಇಲಾಖೆಯಿಂದ ಶೇ. 90ರವರೆಗೆ ಸಹಾಯ ಧನ ಲಭ್ಯವಿರುತ್ತದೆ.
ಹೊಸದಾಗಿ ತೋಟಗಾರಿಕಾ ಬೆಳೆ ಮಾಡುವ ಅಥವಾ ಅಭಿವೃದ್ಧಿಡಿಸಿದ ತೋಟಗಳಲ್ಲಿ ಹನಿ ನೀರಾವರಿ ಅಳವಡಿಸಲು ಆಸಕ್ತಿ ಇರುವ ರೈತರಿಗೆ ಪಹಣಿ, ಆಧಾರ್ ಕಾರ್ಡ್, ಮಣ್ಣು ಮತ್ತು ನೀರಿನ ಪರೀಕ್ಷಾ ವರದಿ ಬ್ಯಾಂಕ್ ಪಾಸ್ ಪುಸ್ತಕ ಪ್ರತಿ ಹಾಗೂ ಜಮೀನಿನ ನಕ್ಷೆಯ ಪ್ರತಿಯನ್ನು ಸಲ್ಲಿಸಿ ಇಲಾಖೆಯಲ್ಲಿ ನೋಂದಣಿ ಮಾಡಿ ಕಾರ್ಯಾದೇಶ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





