ವಿಷದ ಹಾವು ಕಡಿತ: ಬಾಲಕಿ ಮೃತ್ಯು
ಬ್ರಹ್ಮಾವರ, ಅ.16: ಗದ್ದೆ ಅಂಚಿನಲ್ಲಿ ನಡೆದುಕೊಂಡು ಬರುತ್ತಿದ್ದ ಬಾಲಕಿ ಯೊಬ್ಬಳು ವಿಷದ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಹಲುವಳ್ಳಿ ಗ್ರಾಮದ ಕರ್ಜೆ ಕಂಗಿಬೆಟ್ಟು ಎಂಬಲ್ಲಿ ಅ.15ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕಂಗಿಬೆಟ್ಟು ನಿವಾಸಿ ಸಾಕ್ಷಿ(12) ಎಂದು ಗುರುತಿಸಲಾಗಿದೆ. ಸಾಕ್ಷಿ ಕಂಗಿಬೆಟ್ಟು ಡೈರಿಗೆ ಹಾಲು ಕೊಟ್ಟು ವಾಪಾಸು ಮನೆ ಹತ್ತಿರ ಗದ್ದೆಯ ಅಂಚಿ ನಲ್ಲಿ ನಡೆದುಕೊಂಡು ಬರುತ್ತಿರುವಾಗ ವಿಷದ ಹಾವು ಕಚ್ಚಿತ್ತೆನ್ನಲಾಗಿದೆ. ಇದ ರಿಂದ ತೀವ್ರವಾಗಿ ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





