ಮುಂಬೈ ತಂಡ ವಿಜಯ್ ಹಝಾರೆ ಚಾಂಪಿಯನ್
ಬೆಂಗಳೂರು, ಅ. 20: ಇಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ಫೈನಲ್ನಲ್ಲಿ ದಿಲ್ಲಿ ವಿರುದ್ಧ 4 ವಿಕೆಟ್ಗಳ ಜಯ ಗಳಿಸಿದ ಮುಂಬೈ ತಂಡ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಗೆಲುವಿಗೆ 178 ರನ್ಗಳ ಸವಾಲನ್ನು ಪಡೆದ ಮುಂಬೈ ತಂಡ 35 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ಮುಂಬೈ ತಂಡದ ಸಿದ್ದೇಶ್ ಲಾಡ್ 48ರನ್ ಮತ್ತು ವಿಕೆಟ್ ಕೀಪರ್ ಆದಿತ್ಯ ತಾರೆ 71 ರನ್ ಸೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ದಿಲ್ಲಿ ತಂಡ ಧವಳ್ ಕುಲಕರ್ಣಿ(30ಕ್ಕೆ 3), ಶಿವಮ್ ದುಬೆ (23ಕ್ಕೆ 3), ತುಷಾರ್ ದೇಶ್ಪಾಂಡೆ(30ಕ್ಕೆ 2) ಮತ್ತು , ಶಮ್ಸ್ ಮುಲಾನಿ(47ಕ್ಕೆ 1) ದಾಳಿಗೆ ಸಿಲುಕಿ 45.4 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟಾಗಿತ್ತು.
Next Story