ಎಸ್‌ಡಿಪಿಐ: ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಸಮಾವೇಶ

ಮಂಗಳೂರು, ಅ. 20: ಎಸ್‌ಡಿಪಿಐ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಸಮಾವೇಶವು ಕ್ಷೇತ್ರಾಧ್ಯಕ್ಷ ಮುಹಮ್ಮದ್ ಜಮಾಲ್‌ರ ಅಧ್ಯಕ್ಷತೆಯಲ್ಲಿ ಬಜ್ಪೆಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಜೀದ್ ಖಾನ್ ಭಾರತದ ಪ್ರಸಕ್ತ ವಿದ್ಯಮಾನಗಳು, ಸಾಮಾಜಿಕ, ರಾಜಕೀಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಉಲ್ಲೇಖಿಸಿದರಲ್ಲದೆ ಈ ನಿಟ್ಟಿನಲ್ಲಿ ಎಸ್‌ಡಿಪಿಐ ದೇಶದ ಜನರಲ್ಲಿ ರಾಜಕಿಯ ಪ್ರಜ್ಞಾವಂತಿಕೆ ಮೂಡಿಸುತ್ತಿದೆ ಎಂದರು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೊ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಡಬ್ಲುಐವಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ ಭಾಗವಹಿಸಿದರು. ಮುಹಮ್ಮದ್ ಜಮಾಲ್ ಸ್ವಾಗತಿಸಿದರು. ಆಸಿಫ್ ಕೊಟೆಬಾಗಿಲು ವಂದಿಸಿದರು. ಇಮ್ರಾನ್ ಬಜ್ಪೆಕಾರ್ಯಕ್ರಮ ನಿರೂಪಿಸಿದರು.
Next Story





