ಅ.22ರಿಂದ ಮೀನುಗಾರಿಕಾ ಕಾಲೇಜಿನಲ್ಲಿ ಫಿಶ್ಕೋ ಫೆಸ್ಟಿವಲ್
ಮಂಗಳೂರು, ಅ. 20: ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವವದ ಅಂಗವಾಗಿ ಅ.22ರಿಂದ 24 ರವರೆಗೆ ಮಹಾವಿದ್ಯಾಲಯದಲ್ಲಿ ಗೋಲ್ಡನ್ ಜ್ಯುಬಿಲಿ ಫಿಶ್ಕೋ ಫೆಸ್ಟಿವಲ್ ಹಮ್ಮಿ ಕೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅ.22ರಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜೇಡಿ ಮಣ್ಣಿನ ಕಲಾಕೃತಿ ರಚನೆ, ಡಂ ಛರಾಡ್, ರಸ ಪ್ರಶ್ನೆ, ಭರತ ನಾಟ್ಯ, ಸಮೂಹ ನೃತ್ಯ, ಚರ್ಚಾ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಚಿತ್ರಕಲೆ, ಭಾವಗೀತೆ, ಸಮೂಹ ಗಾಯನ, ರಂಗೋಲಿ, ಚಲನಚಿತ್ರ ಗೀತೆ, ವೈವಿಧ್ಯಮಯ ಮನೋರಂಜನೆ, ಮೈಮ್, ಫ್ಯಾಷನ್ ಪೆರೇಡ್, ಬ್ಯಾಟ್ಲ್ ಆಫ್ ಬ್ಯಾಂಡ್ಸ್, ಜಾನಪದ ನೃತ್ಯ, ಕೊಲಾಜ್, ಪಾಶ್ಚಿಮಾತ್ಯ ಸಂಗೀತ, ಕಾರ್ಟೂನಿಂಗ್, ಮ್ಯಾಡ್ ಆಡ್ಸ್, ಚಹರೆಯ ವರ್ಣ ಕಲೆ, ರೇಖಾ ಚಿತ್ರ ಇತ್ಯಾದಿ ನಡೆಯಲಿದೆ. ಇದು ಅಂತರ ಕಾಲೇಜುಗಳ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮವೂ ಆಗಿದ್ದು, ದ.ಕ. ಮತ್ತು ಉಡುಪಿ ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಇದನ್ನು ನಡೆಸಲಾಗುತ್ತದೆ. ಈ ಮೂರು ದಿನಗಳಲ್ಲಿ 50 ಕಾಲೇಜುಗಳು ಭಾಗವಹಿಸುತ್ತಿವೆ ಎಂದು ಕಾಲೇಜಿನ ಡೀನ್ ಡಾ.ಎಚ್. ಶಿವಾನಂದ ಮೂರ್ತಿ ತಿಳಿಸಿದ್ದಾರೆ.





