Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮಂಗಳಸೂತ್ರವನ್ನು ಮಾರಿ ಅಮ್ಮ ನನ್ನನ್ನು...

ಮಂಗಳಸೂತ್ರವನ್ನು ಮಾರಿ ಅಮ್ಮ ನನ್ನನ್ನು ಎಂಬಿಬಿಎಸ್‌ಗೆ ಸೇರಿಸಿದ್ದರು: ಡಾ.ವಿಜಯಲಕ್ಷ್ಮಿ ದೇಶಮಾನೆ

ವಾರ್ತಾಭಾರತಿವಾರ್ತಾಭಾರತಿ20 Oct 2018 10:20 PM IST
share
ಮಂಗಳಸೂತ್ರವನ್ನು ಮಾರಿ ಅಮ್ಮ ನನ್ನನ್ನು ಎಂಬಿಬಿಎಸ್‌ಗೆ ಸೇರಿಸಿದ್ದರು: ಡಾ.ವಿಜಯಲಕ್ಷ್ಮಿ ದೇಶಮಾನೆ

ಬೆಂಗಳೂರು, ಅ.20: ನಾನು ಎಂಬಿಬಿಎಸ್‌ಗೆ ಸೀಟು ಪಡೆಯಬೇಕಾದ ವೇಳೆ ನಮ್ಮ ಗುಲ್ಬರ್ಗದಲ್ಲಿ ತೀವ್ರ ಬರಗಾಲವಿತ್ತು. ನನ್ನ ಪ್ರವೇಶಕ್ಕೆ ಎಲ್ಲಿಯೂ ಹಣ ಸಿಗದಿದ್ದ ಸಂದರ್ಭದಲ್ಲಿ ನನ್ನ ತಾಯಿ ತಮ್ಮ ಮಂಗಳಸೂತ್ರವನ್ನೇ ಮಾರಿ ನನ್ನನ್ನು ಎಂಬಿಬಿಎಸ್‌ಗೆ ಸೇರಿಸಿದರು ಎಂದು ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಮಾಜಿ ನಿರ್ದೇಶಕಿ ಹಾಗೂ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಭಾವುಕರಾದರು.

ಶನಿವಾರ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮದು ಅತ್ಯಂತ ಕಡು ಬಡತನದ ಕುಟುಂಬವಾಗಿತ್ತು. ರಸ್ತೆ ಬದಿಯಲ್ಲಿ ತಾಯಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ನಾನು ಶಾಲೆ ಮುಗಿಸಿಕೊಂಡು ಅಮ್ಮನ ಅಂಗಡಿಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದೆ ಹಾಗೂ ನಾನು ಹೆಚ್ಚು ಅಲ್ಲಿಯೇ ಓದುತ್ತಿದ್ದೆ. ನನ್ನ ತಾಯಿ ಅಂಗಡಿಯಲ್ಲಿ ಗಳಿಸಿದ ಎಲ್ಲವನ್ನೂ ನಮಗೆ ಸೀಮಿತ ಮಾಡಿದ್ದರು. ಆಕೆಗಾಗಿ ಏನನ್ನೂ ಉಳಿಸಿಕೊಂಡಿರಲಿಲ್ಲ ಎಂದು ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

ನಾನು ಕಿದ್ವಾಯಿ ಸಂಸ್ಥೆಯಲ್ಲಿ ಸುಮಾರು 35 ವರ್ಷಗಳ ಕಾಲ ಶ್ರಮಪಟ್ಟು ದುಡಿದೆ. ನಾನೊಬ್ಬ ಕಾರ್ಮಿಕಳು. ನನ್ನ ಕೆಲಸ ಹಗಲಿರುಳು ದುಡಿಯುವುದು ಎಂದು ಭಾವಿಸಿ ಕೆಲಸ ಮಾಡಿದ್ದೇನೆ. ಸರ್ಜಿಕಲ್ ಆಂಕೋಲಜಿ ತುಂಬಾ ಕಷ್ಟದ ಕೆಲಸ. ಆದರೂ, ಜಾಗರೂಕತೆಯಿಂದಲೇ ಕೆಲಸ ನಿರ್ವಹಿಸಿದ್ದೇನೆ. ಸರ್ಜರಿ ಮಾಡುವ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡಲು ಸಮಯವಿರುತ್ತಿರಲಿಲ್ಲ. ದಿನದಲ್ಲಿ 24 ಗಂಟೆಯೂ ಕೆಲಸ ಮಾಡುತ್ತಿದ್ದೆವು ಎಂದು ನುಡಿದರು.

ಸರ್ಜರಿ ಮಾಡುವ ಸಂದರ್ಭದಲ್ಲಿ ರೋಗಿ ಉಳಿಯುತ್ತಾರೆ ಎಂಬ ಗ್ಯಾರಂಟಿ ಇರುತ್ತಿರಲಿಲ್ಲ. ಆದರೂ, ನಾವು ಕೆಲಸವನ್ನು ಮಾಡುತ್ತಿದ್ದೆವು ಎಂದ ಅವರು, ನಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಯಾವ ರೋಗಿ ಬಂದರೂ ಎಲ್ಲರಿಗೂ ಬೆಡ್ ಸಿಗುವವರೆಗೂ ಅವರೊಂದಿಗೆ ನಿಲ್ಲುತ್ತಿದ್ದೆ. ಇದೇ ನನ್ನನ್ನು ಮತ್ತು ನನ್ನ ವ್ಯಕ್ತಿತ್ವವನ್ನು ಮತ್ತಷ್ಟು ಬೆಳೆಸಲು ಸಹಕಾರಿಯಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ನನಗೆ ಶಿಕ್ಷಕಿಯಾಗಬೇಕು ಎಂಬ ಆಸೆಯಿತ್ತು, ನಮ್ಮ ತಂದೆಗೆ ನಾನು ಸರ್ಜನ್ ಆಗಬೇಕು ಎಂಬ ಆಸೆಯಿತ್ತು. ಆದುದರಿಂದ ಟೀಚರ್ ಕನಸು ಕೈ ಬಿಟ್ಟು ಈ ಕಡೆಗೆ ಹೆಚ್ಚು ಗಮನ ನೀಡಿದೆ. ನಾವು ಮಾದಿಗ ಜಾತಿಗೆ ಸೇರಿದ ಜನರು. ಚಪ್ಪಲಿಗೆ ಸೂಜಿ ಹಾಕಿ ಅಭ್ಯಾಸವಾಗಿದೆ, ಹೀಗಾಗಿ, ಸರ್ಜನ್ ಆಗುವುದು ಕಷ್ಟವಲ್ಲ ಎಂದೆನಿಸಿತ್ತು ನನಗೆ ಎಂದು ಅವರು ತಿಳಿಸಿದರು.

ಗುಲ್ಬರ್ಗಾದಿಂದ ಶಿಕ್ಷಣ ಮುಗಿಸಿಕೊಂಡು ಬೆಂಗಳೂರಿಗೆ ಬಂದಾಗ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದ್ದೆ. ಅವತ್ತು ನಮ್ಮಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ರೆಸಿಡೆಂಟಲ್ ಸರ್ಜನ್ ಆಗಿ ಕೆಲಸ ನಿರ್ವಹಿಸಿದೆ ಎಂದು ಹೇಳಿದರು.

ಸರಕಾರಿ ಆಸ್ಪತ್ರೆಗಳನ್ನು ಅವಲಂಬಿಸಿ: ಖಾಸಗಿ ಆಸ್ಪತ್ರೆಗಳು ವಸೂಲಿ ಕೇಂದ್ರಗಳಾಗಿವೆ. ಹೀಗಾಗಿ, ಸಾಮಾನ್ಯ ಜನರು ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳುವಂತಾಗಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ನುರಿತ ಹಾಗೂ ಅನುಭವಿ ವೈದ್ಯರಿರುತ್ತಾರೆ. ಹೆಚ್ಚಿನ ಒತ್ತಡವಿರುವುದರಿಂದ ಚಿಕಿತ್ಸೆ ನೀಡುವುದು ತಡವಾಗಬಹುದು. ಆದರೆ, ಸರಕಾರಿ ಆಸ್ಪತ್ರೆಗಳಿಗಿಂತ ಉತ್ತಮವಾದ ಚಿಕಿತ್ಸೆ ಖಾಸಗಿ ಆಸ್ಪತ್ರೆಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಕಳೆದ ಎರಡು ವರ್ಷಗಳ ಹಿಂದೆ ನನಗೆ ಹೃದಯಾಘಾತವಾದ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಅಲ್ಲಿ ಒಟ್ಟಾರೆ ಚಿಕಿತ್ಸೆಗೆ ಕೇವಲ 30 ಸಾವಿರ ಖರ್ಚು ಮಾಡಿದ್ದರು. ಅದನ್ನೇ ಖಾಸಗಿ ಆಸ್ಪತ್ರೆಯಲ್ಲಿ ಮಾಡಿದ್ದರೆ ಅಂದಾಜು 10 ಲಕ್ಷ ರೂ.ಗಳು ಬೇಕಾಗಬಹುದಿತ್ತು. ಎಣ್ಣೆ ಪದಾರ್ಥ, ಉಪ್ಪಿನಾಂಶ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡುವ ಮೂಲಕ ಹಾಗೂ ಕ್ರಮಬದ್ಧವಾದ ತರಕಾರಿ, ಸೊಪ್ಪುಗಳನ್ನು ಸೇವಿಸುವುದರಿಂದ ರೋಗಗಳಿಗೆ ಮುಕ್ತಿ ನೀಡಬಹುದು ಎಂದು ಹೇಳಿದರು.

ಎಂಬಿಬಿಎಸ್‌ಗೆ ಬೆಂಗಳೂರಿನಲ್ಲಿ ಸಂದರ್ಶನಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ಇದ್ದಕ್ಕಿಂದ್ದಂತೆ ಸಂದರ್ಶನ ಮುಂದೂಡಲಾಗಿದೆ ಎಂದಿದ್ದರು. ಹೊರಗಡೆ ಜೋರು ಮಳೆ. ಆಶ್ರಯ ನೀಡಲು ಯಾರೂ ಇರಲಿಲ್ಲ. ಅಪ್ಪ ಕಾರ್ಮಿಕರ ಬಳಿ ಬೇಡಿಕೊಂಡು ಅವರ ಕೋಣೆಯೊಳಗೆ ನನ್ನನ್ನು ಮಲಗಿಸಿ ರಾತ್ರಿ ಪೂರ್ತಿ ಅವರು ನಿದ್ದೆ ಮಾಡಿರಲಿಲ್ಲ. ಈ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದೆ ಕಾಣುತ್ತಿದೆ ಎಂದು ಡಾ.ವಿಜಯಲಕ್ಷ್ಮಿ ದೇಶಮಾನೆ ಭಾವುಕರಾಗಿ ನುಡಿದರು.

ಕ್ಯಾನ್ಸರ್ ಎಂದರೆ ನನಗೆ ಗೊತ್ತಿರಲಿಲ್ಲ. ಬಡತನ ಎಂಬುದು ಅಷ್ಟೇ ಗೊತ್ತಿತ್ತು. ಆದರೆ, ಇತ್ತೀಚಿಗೆ ನನ್ನ ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟಾಗ ಅವರ ದೇಹವನ್ನು ಬೆಂಗಳೂರಿನಿಂದ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗಲೇ ಕ್ಯಾನ್ಸರ್ ಅಂದರೆ ಏನೆಂಬುದು ಗೊತ್ತಾಯಿತು.

- ಡಾ.ವಿಜಯಲಕ್ಷ್ಮಿ ದೇಶಮಾನೆ, ವೈದ್ಯೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X