ಪ್ರೊ ಕಬಡ್ಡಿ: ಡೆಲ್ಲಿ, ಪುಣೆ ತಂಡಕ್ಕೆ ಜಯ
ಹೊಸದಿಲ್ಲಿ, ಅ.21: ಪ್ರೊ ಕಬಡ್ಡಿ ಲೀಗ್ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಪುಣೇರಿ ಪಲ್ಟನ್ ತಂಡಗಳು ಜಯ ಸಾಧಿಸಿವೆ. ಮೊದಲು ನಡೆದ ಪಂದ್ಯದಲ್ಲಿ ದಬಾಂಗ್ ತಂಡ ಬಂಗಾಳ ವಾರಿಯರ್ಸ್ ತಂಡವನ್ನು 39-30 ಅಂತರದಿಂದ ಮಣಿಸಿತು. ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಬೆಂಗಳೂರು ಬುಲ್ಸ್ ತಂಡವನ್ನು 27-25 ಅಂತರದಿಂದ ರೋಚಕವಾಗಿ ಸೋಲಿಸಿದೆ.
Next Story