Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ22 Oct 2018 12:08 AM IST
share
ಓ ಮೆಣಸೇ...

ಸುಳ್ಳುಗಳಿಗೆ ಕೈಕಾಲುಗಳಿರುವುದಿಲ್ಲ - ಎಂ.ಜೆ.ಅಕ್ಬರ್, ಕೇಂದ್ರ ಸಚಿವ
►ನಾಚಿಕೆಯಂತೂ ಇರುವುದೇ ಇಲ್ಲ.

---------------------

ವಿದೇಶಗಳ ವಿಶ್ವವಿದ್ಯಾನಿಲಯಗಳಿಗೆ ಸಾವಿರ ರೂ. ಕೊಟ್ಟರೆ ಯಾರಿಗೆ ಬೇಕಾದರೂ ಡಾಕ್ಟರೇಟ್ ಸಿಗುತ್ತದೆ -ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

►ದೇಶದೊಳಗೆ ಅದು 500ಕ್ಕೆ ಬಿಕರಿಯಾಗುತ್ತಿದೆ.

---------------------

ಶ್ವೇತಭವನ ಒಂದು ಅತ್ಯಂತ ವಂಚನಾ ಹಾಗೂ ದುಷ್ಟ ಜಗತ್ತಾಗಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
►ನೀವು ಅದರೊಳಗೆ ಪ್ರವೇಶಿಸಿದಾಗಲೇ ಜಗತ್ತಿಗೆ ಗೊತ್ತಾಗಿ ಬಿಟ್ಟಿದೆ.

---------------------
ಡಿಕೆಶಿ ಹುಲಿ ಇದ್ದಂತೆ, ಶ್ರೀರಾಮುಲು ಅಂತಹ ಹುಲಿಯ ಬಾಯಿಗೆ ಕೈ ಹಾಕಲು ಹೋಗಬಾರದು -ಆಂಜನೇಯ, ಕಾಂಗ್ರೆಸ್ ನಾಯಕ
►ಅಂತಹ ಅಪಾಯಕಾರಿ ಪ್ರಾಣಿಗಳನ್ನು ಪಕ್ಷದೊಳಗೆ ಯಾಕಿಟ್ಟುಕೊಂಡಿದ್ದೀರಿ?

---------------------

ಸೂಟು-ಬೂಟು ಧರಿಸದವರು ಮೋದಿಗೆ ಭಾಯಿ ಅಲ್ಲ - ರಾಹುಲ್ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

►ಸದ್ಯಕ್ಕೆ ಬಾಯಿಯೇ ಮೋದಿಯ ಆಸ್ತಿ.

---------------------
ಶ್ರೀರಾಮುಲು ನನ್ನ ಆತ್ಮೀಯ ಗೆಳೆಯ , ನನ್ನ ಮೇಲೆ ಪ್ರೀತಿ ಜಾಸ್ತಿಯಾಗಿ ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ ಅಷ್ಟೆ -ಡಿ.ಕೆ.ಶಿವಕುಮಾರ್, ಸಚಿವ

►ಜೊತೆ ಜೊತೆಯಲಿ ಬಾಳುವ ಕನಸೇ?

---------------------

ನಾವು ಆಪರೇಶನ್ ಮಾಡಬೇಕು ಎಂದಿದ್ದರೆ ಯಾವಾಗಲೋ ಮಾಡಿ ಮುಗಿಸುತ್ತಿದ್ದೆವು - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
►ರೋಗಿಯ ಸ್ಥಿತಿ ಊಹಿಸಿದರೆ ಭಯವಾಗುತ್ತೆ.

---------------------

ಒಳ್ಳೆಯ ಹಿಂದೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹೇಳಲ್ಲ - ಶಶಿ ತರೂರ್, ಸಂಸದ
►ಗಾಂಧೀಜಿ ಒಳ್ಳೆಯ ಹಿಂದೂ ಆಗಿದ್ದರು.

---------------------

ದೇಶ ಆಳುವವರು ದೇಶ ಅಂದರೆ ಆದೇಶವಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು - ಚಂದ್ರಶೇಖರ ಪಾಟೀಲ, ಸಾಹಿತಿ
►ಮತ್ತೆ ಯಾವ ದೇಶ ಎಂದು ತಿಳಿದುಕೊಳ್ಳಬೇಕು?

---------------------

ಟಿಪ್ಪು ಜಯಂತಿ ಆಚರಣೆ ಮೂಲಕ ಸರಕಾರ ಕೊಲೆ ದಂಗೆಗೆ ಪ್ರಚೋದನೆ ನೀಡುತ್ತಿದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
►ಅಂತೂ ಕೊಲೆ ದಂಗೆ ಮಾಡಲು ನಿಮಗೆ ಪ್ರಚೋದನೆ ಸಿಕ್ಕಿದೆ ಎಂದಾಯಿತು.

---------------------

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲ್ಲಿಲ್ಲದ ಹಾವು - ಶೋಭಾ ಕರಂದ್ಲಾಜೆ, ಸಂಸದೆ
►ನಿಮ್ಮನ್ನು ಕಚ್ಚಿದ್ದು ಯಾವಾಗ ಎಂದು ಹೇಳಿದರೆ, ಮೀಟೂ ಚಳವಳಿಗೆ ಹೊಸ ಸೇರ್ಪಡೆಯಾದೀತು.

---------------------

ಬಿಜೆಪಿಯ ಯಾವ ಬಾಂಬೂ ಸಿಡಿಯುವುದಿಲ್ಲ - ಈಶ್ವರ್‌ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
►ಸಿಡಿಯುವ ಬಾಂಬ್‌ಗಾಗಿ ಅವರದೇ ಸನಾತನಸಂಸ್ಥೆ ಎನ್ನುವ ಸ್ವತಂತ್ರ ಘಟಕ ಇದೆ.

---------------------
ಉಪ ಚುನಾವಣೆ ರಾಜಕೀಯದ ದಿಕ್ಕು ಬದಲಿಸಲಿದೆ - ಆಸ್ಕರ್ ಫೆರ್ನಾಂಡಿಸ್, ರಾಜ್ಯ ಸಭಾ ಸದಸ್ಯ,

►ವೃದ್ಧಾಶ್ರಮದೆಡೆಗೆ ಇರಬಹುದೇ?

---------------------

ಅಧಿಕಾರ ಇರಲಿ ಇಲ್ಲದಿರಲಿ, ಉಸಿರು ಇರುವವರೆಗೆ ಜನಸೇವೆ ಮಾಡಲು ನಾನು ಬದ್ಧ - ಪ್ರಮೋದ್ ಮಧ್ವರಾಜ್, ಮಾಜಿ ಸಚಿವ
►ಅಧಿಕಾರ ನಿಂತಾಗ ಕೆಲವರ ಉಸಿರೂ ನಿಂತು ಬಿಡುತ್ತದೆ.

---------------------

ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂ ನಿಷೇಧಿಸಿದಾಗ ಸ್ವಾಗತಿಸಿದವರು ಈಗ ಶಬರಿಮಲೆ ಕುರಿತ ತೀರ್ಪನ್ನು ವಿರೋಧಿಸುವುದು ಸರಿಯಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
►ಆರೆಸ್ಸೆಸ್ ಎಂದ ಮೇಲೆ ಹಾಗೆಯೇ ಇರಬೇಕಾಗುತ್ತದೆ.

---------------------

ಭಾರತದ ಪ್ರಗತಿಗೆ ಪ್ರಬಲ ನಾಯಕತ್ವದ ಅಗತ್ಯವಿದೆ - ಅರುಣ್‌ಜೇಟ್ಲಿ, ಕೇಂದ್ರ ಸಚಿವ

►ಅಂದರೆ ಮೋದಿ ಪ್ರಬಲ ನಾಯಕರಲ್ಲ ಎನ್ನುತ್ತೀರಾ?

---------------------

ಬಿಜೆಪಿ ಸರಕಾರ ರಚಿಸಲು ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ಕಳೆದ ವಿಧಾನಾ ಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆ
- ಶ್ರೀರಾಮುಲು, ಶಾಸಕ

►ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಒಂದೇ ಕ್ಷೇತ್ರದಲ್ಲಿ ಶಾಸಕನಾಗಲು ಸಾಧ್ಯ ಎನ್ನುವುದನ್ನು ಯಾರೂ ತಿಳಿಸಿರಲಿಲ್ಲವೇ?

---------------------

ಮುಖ್ಯಮಂತ್ರಿ ಕುಮಾರಸ್ವಾಮಿಗಿಂತ ನಮಗೆ ನಮ್ಮ ಪಕ್ಷ ಮುಖ್ಯ -ಚೆಲುವರಾಯಸ್ವಾಮಿ, ಮಾಜಿ ಸಚಿವ
►ನಿಮ್ಮ ಪಕ್ಷ ಯಾವುದು ಎನ್ನುವುದನ್ನಾದರೂ ಸ್ಪಷ್ಟಪಡಿಸಿ.

---------------------

ಉಪ ಚುನಾವಣೆ ನಂತರ ಸರಕಾರ ಇನ್ನಷ್ಟು ಗಟ್ಟಿಯಾಗಲಿದೆ- ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
►ಮೋದಿ ಸರಕಾರವೇ?

---------------------

ಯಾವ ಯಾವ ಜಯಂತಿಗಳಿವೆಯೋ ಅವೆಲ್ಲವನ್ನೂ ಮಾಡುತ್ತೇವೆ - ಎಚ್.ಡಿ.ರೇವಣ್ಣ, ಸಚಿವ

►ನಟಿ ಜಯಂತಿಯವರ ಜಯಂತಿಯೂ ಇದರಲ್ಲಿ ಸೇರ್ಪಡೆಯಾಗುತ್ತದೆಯೇ?

---------------------

ರಾಮ ನಡೆದ ಹಾದಿ ಇನ್ನೂ ನಮಗೆ ಮಾರ್ಗದರ್ಶಕ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
►ವನವಾಸಕ್ಕೆ ನಡೆದ ಹಾದಿಯೇ?

---------------------

ಇನ್ನು ಮುಂದೆ ನಾನು ಜಾತಿ-ಧರ್ಮದ ವಿಚಾರದಲ್ಲಿ ತಲೆ ಹಾಕುವುದಿಲ್ಲ- ಡಿ.ಕೆ.ಶಿವಕುಮಾರ್, ಸಚಿವ
►ತಲೆ ಹಾಕುವ ವಿಚಾರಗಳ ಪಟ್ಟಿಯನ್ನಾದರೂ ಕೊಡಿ.

---------------------

ಮೋದಿ ಪ್ರಧಾನಿಯಾಗಿದ್ದು ಪರಿಶ್ರಮದಿಂದ - ಶಾಸಕ ಸಿ.ಟಿ. ರವಿ.
►ಗುಜರಾತ್ ಗಲಭೆಗಾಗಿ ಅವರು ಪಟ್ಟ ಪರಿಶ್ರಮ ಜಗತ್ತಿಗೇ ಗೊತ್ತು.
 

share
ಪಿ.ಎ.ರೈ
ಪಿ.ಎ.ರೈ
Next Story
X