ಬಿವಿಟಿಯಲ್ಲಿ ತೋಟಗಾರಿಕೆ, ಕೈತೋಟ ತರಬೇತಿ
ಉಡುಪಿ, ಅ.22: ತೋಟಗಾರಿಕೆ ಮತ್ತು ಕೈತೋಟದ ಬಗ್ಗೆ ಒಂದು ದಿನದ ತರಬೇತಿಯನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಅ.30ರಂದು ಬೆಳಗ್ಗೆ 9:30ರಿಂದ ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ತೋಟಗಾರಿಕಾ ಬೆಳೆಗಳಾದ ಬಾಳೆ, ತಂಗು, ಅಡಿಕೆ ಬೆಳೆಗಳು, ಹಣ್ಣಿನ ಗಿಡಗಳನ್ನು ಬೆಳೆಸುವುದು, ರೋಗ ಸಂರಕ್ಷಣೆ, ಗೊಬ್ಬರ ನೀರು ಇತ್ಯಾದಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು. ಅಲ್ಲದೇ ಕೈ ತೋಟದ ಬೆಳೆಗಳಾದ ತರಕಾರಿ, ಹೂವಿನ ಗಿಡ ಇತ್ಯಾದಿಗಳನ್ನು ಮನೆಯಂಗಳದಲ್ಲಿ ಮತ್ತು ಮಿಶ್ರ ಬೆಳೆಯಾಗಿ ತರಕಾರಿ, ಹಣ್ಣಿನ ಗಿಡ ಬೆಳೆಸುವುದನ್ನು ತಿಳಿಸಲಾಗುವುದು. ತಳಿಗಳ ಆಯ್ಕೆ, ಕಂಪೋಸ್ಟ್ ಗೊಬ್ಬರ ತಯಾರಿ, ಸುಲಭ ರೀತಿಯಲ್ಲಿ ರೋಗ ನಿವಾರಣೆ ಇತ್ಯಾದಿ ವಿಷಯಗಳ ಬಗ್ಗೆ ಕೃಷಿ ತಜ್ಞರು ಮತ್ತು ಕೆವಿಕೆಯ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.
ಈ ತರಬೇತಿಯಲ್ಲಿ ಎಲ್ಲ ವಯೋಮಿತಿಯ ಆಸಕ್ತ ಪುರುಷ, ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು. ಆಸಕ್ತರು ತಮ್ಮ ಭಾಗವಹಿಸುವಿಕೆಯನ್ನು ಅ.27ರೊಳಗೆ ಭಾರತೀಯ ವಿಕಾಸ ಟ್ರಸ್ಟ್, ಅನಂತ, ಮಣಿಪಾಲ ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ ಉಡುಪಿ- 576102 (ದೂರವಾಣಿ:0820-2570263) ಇಲ್ಲಿ ದೃಢೀಕರಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.





