ಪಿಸ್ತೂಲು ಪ್ರದರ್ಶನ: ಬಿಎಸ್‌ಪಿ ಮಾಜಿ ಸಂಸದನ ಪುತ್ರನಿಗೆ 14 ದಿನಗಳ ನ್ಯಾಯಾಂಗ ಬಂಧನ

ಹೊಸದಿಲ್ಲಿ,ಅ.22: ಮಾಜಿ ಬಿಎಸ್‌ಪಿ ಸಂಸದ ರಾಕೇಶ ಪಾಂಡೆಯವರ ಪುತ್ರ ಆಶಿಷ್ ಪಾಂಡೆಗೆ ಇಲ್ಲಿಯ ಮಹಾನಗರ ನ್ಯಾಯಾಲಯವು ಸೋಮವಾರ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ನಗರದ ಪಂಚತಾರಾ ಹೋಟೆಲ್‌ವೊಂದರಲ್ಲಿ ಪಿಸ್ತೂಲನ್ನು ತೋರಿಸಿ ಭೀತಿಯನ್ನು ಸೃಷ್ಟಿಸಿದ್ದ ಆರೋಪದಲ್ಲಿ ಪಾಂಡೆಯನ್ನು ಬಂಧಿಸಲಾಗಿದ್ದು,ಪೊಲೀಸ್ ಕಸ್ಟಡಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.
ಇದಕ್ಕೂ ಮುನ್ನ ಪಾಂಡೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯವು,ಆತನ ವಿರುದ್ಧ ಜಾಮೀನು ರಹಿತ ವಾರಂಟ್‌ನ್ನು ಹೊರಡಿಸಿತ್ತು.
ಅ.14ರಂದು ಈ ಘಟನೆ ನಡೆದಿದ್ದು,ಅದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪೋಲಿಸರು ನಾಪತ್ತೆಯಾಗಿದ್ದ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು.
ಅ.16ರಂದು ಐಪಿಸಿಯ ವಿವಿಧ ಕಲಮ್‌ಗಳಡಿ ಪಾಂಡೆ ವಿರುದ್ಧ ಪ್ರಕರಣ ದಾಖಲಾಗಿತ್ತು.
Next Story





