ತಿರುಮಲ ತಿರುಪತಿ ದೇವಸ್ಥಾನದ ವಿಧಿ ವಿಧಾನ ಸರಿಯಿಲ್ಲ: ಆರೋಪ
ಬೆಂಗಳೂರು, ಅ. 22: ತಿರುಮಲ ತಿರುಪತಿ ದೇವಸ್ಥಾನದ ವಿಧಿ ವಿಧಾನಗಳು ದೇವಸ್ಥಾನದ ಅಗಮ ಶಾಸ್ತ್ರದ ಪ್ರಕಾರ ನಡೆಯುತ್ತಿಲ್ಲ ಎಂದು ತಿರುಪತಿಯ ಚರಮ ಗ್ರಂಥಮ್ ಹೋಲ್ಡರ್ ಶ್ರೀವಾರಿ ದಾದಾ ಆರೋಪಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಾಜಿಯ ಸೇವೆ ಸಲ್ಲಿಸಲು ದೇವಸ್ಥಾನ ಟಿಟಿಡಿ ಬೋರ್ಡ್ ಸ್ಥಾಪಿಸಲಾಗಿದ್ದು, ಬೋರ್ಡ್‌ನ ಸದಸ್ಯರು ತಪ್ಪು ಆಚರಣೆಗಳನ್ನು ಮಾಡುವ ಮೂಲಕ ಜನರಿಗೆ ತಪ್ಪು ಉತ್ಸವಗಳನ್ನು ಪರಿಚಯಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಹತ್ತು ವರ್ಷಗಳ ಸತತ ಪ್ರಯತ್ನದಿಂದ ಈ ಮಾಹಿತಿಗಳನ್ನು ವಿಐಪಿ ಭಕ್ತರು, ಸಾಮಾನ್ಯ ಭಕ್ತರು, ಅಗಮ ಶಾಸ್ತ್ರದ ಪಂಡಿತರು, ಟಿಟಿಡಿಯ ಹಿರಿಯ ಅರ್ಚಕರಿಂದ ಪಡೆದಿದ್ದು, ತೋಮಾಲ ಸೇವೆ, ಅರ್ಜಿತ ಬ್ರಹ್ಮೋತ್ಸವ, ಪೂರಾಭಿಷೇಕ ಸೇವೆಗಳು ಅಗಮ ಶಾಸ್ತ್ರದ ಭಾಗವಲ್ಲ. ಹೀಗಾಗಿ ಈ ಸೇವಾ ಉತ್ಸವಗಳನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
Next Story





