ಪತ್ರಕರ್ತ ಖಶೋಗಿ ಪುತ್ರನಿಗೆ ಕರೆ ಮಾಡಿದ ಸೌದಿ ಯುವರಾಜ

ಇಸ್ತಾಂಬುಲ್, ಅ. 22: ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯ ಕೌನ್ಸುಲೇಟ್ ಕಚೇರಿಯಲ್ಲಿ ನಡೆದ ಪತ್ರಕರ್ತ ಜಮಾಲ್ ಖಶೋಗಿಯ ಸಾವಿಗೆ ಸಂತಾಪ ಸೂಚಿಸಲು ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಜಮಾಲ್ ರ ಮಗನಿಗೆ ಕರೆ ಮಾಡಿದ್ದಾರೆ ಎಂದು ಸೌದಿ ಅರೇಬಿಯ ಸೋಮವಾರ ಘೋಷಿಸಿದೆ. ದೊರೆ ಸಲ್ಮಾನ್ ಕೂಡ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ.
ಇಸ್ತಾಂಬುಲ್‌ನಲ್ಲಿರುವ ತನ್ನ ಕೌನ್ಸುಲೇಟ್ ಕಚೇರಿಯಲ್ಲಿ ಖಶೋಗಿಯ ಹತ್ಯೆಯಾಗಿದೆ ಎಂಬುದನ್ನು ಸೌದಿ ಅರೇಬಿಯ ಅಕ್ಟೋಬರ್ 2ರಂದು ಒಪ್ಪಿಕೊಂಡ ಬಳಿಕವೂ, ದೇಶದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಟರ್ಕಿ ಉದ್ಯೋಗಿಗಳಿಗೆ ಕೆಲಸಕ್ಕೆ ಬರುವುದು ಬೇಡ ಎನ್ನಲಾಗಿತ್ತೆ?
ಪತ್ರಕರ್ತ ಜಮಾಲ್ ಖಶೋಗಿ ಸಾವಿನ ಬಗ್ಗೆ ಹೇಳಿಕೆ ಪಡೆಯಲು ಇಸ್ತಾಂಬುಲ್ ಕೌನ್ಸುಲೇಟ್‌ನ 28 ಉದ್ಯೋಗಿಗಳನ್ನು ಇಸ್ತಾಂಬುಲ್ ಮುಖ್ಯ ಪ್ರಾಸಿಕ್ಯೂಟರ್ ಸೋಮವಾರ ಕರೆಸಿಕೊಂಡಿದ್ದಾರೆ. ಈ ಉದ್ಯೋಗಿಗಳಲ್ಲಿ ಟರ್ಕಿ ನಾಗರಿಕರು ಮತ್ತು ವಿದೇಶಿಯರು ಇದ್ದಾರೆ ಎಂದು ಟರ್ಕಿ ಸರಕಾರಿ ಟಿವಿ ‘ಟಿಆರ್‌ಟಿ’ ವರದಿ ಮಾಡಿದೆ.
ಕೌನ್ಸುಲೇಟ್ ಸಿಬ್ಬಂದಿಯನ್ನು ಹಿಂದೆಯೂ ಪ್ರಾಸಿಕ್ಯೂಟರ್‌ಗಳು ಪ್ರಶ್ನಿಸಿದ್ದರು. ಆಗ ಕೆಲವು ಟರ್ಕಿ ಉದ್ಯೋಗಿಗಳು, ಖಶೋಗಿ ಕೌನ್ಸುಲೇಟ್‌ಗೆ ಬರುವ ಹೊತ್ತಿಗೆ ಕಚೇರಿಗೆ ಹೋಗುವುದು ಬೇಡ ಎಂಬ ಸೂಚನೆಯನ್ನು ನಮಗೆ ನೀಡಲಾಗಿತ್ತು ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ.







