ಮಲ್ಪೆ : ಸುವರ್ಣ ನದಿಯಲ್ಲಿ ಮೃತದೇಹ ಪತ್ತೆ
ಮಲ್ಪೆ, ಅ.22: ಕೆಮ್ಮಣ್ಣು ಸನ್ಯಾಸಿಕುದ್ರುವಿನ ಸುವರ್ಣ ನದಿಯಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಅ.21ರಂದು ಬೆಳಗ್ಗೆ 11ಗಂಟೆಗೆ ಪತ್ತೆಯಾಗಿದೆ.
ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಮೃತ ವ್ಯಕ್ತಿಯು 2-3 ದಿನಗಳ ಹಿಂದೆ ಹೊಳೆಯಲ್ಲಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story