ಪಡುಬಿದ್ರಿ ಬಳಿ ಕಾರು ಪಲ್ಟಿ: ಮಗು ಮೃತ್ಯು

ಪಡುಬಿದ್ರಿ, ಅ.22: ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಕಾರೊಂದು ಮಗುಚಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಪಡುಬಿದ್ರಿ ಬೀಡು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ.21ರಂದು ಸಂಜೆ ವೇಳೆ ನಡೆದಿದೆ.
ಮಹಾರಾಷ್ಟ್ರ ಸತಾರ ಜಿಲ್ಲೆಯ ಯಾಸಿರ್ ಯಾಸಿನ್ ನದಾಫ್ ಎಂಬವರ ಅಕ್ಕನ ಒಂದು ವರ್ಷ ನಾಲ್ಕು ತಿಂಗಳ ಮಗು ಓವೈಸ್ ಮೆಹಬೂಬ್ ಸೈಯ್ಯದ್ ಮೃತಪಟ್ಟಿದೆ. ಕಾಪು ಕಡೆಯಿಂದ ಮುಲ್ಕಿ ಕಡೆ ಹೋಗುತ್ತಿದ್ದ ಮಾರುತಿ ಆಲ್ಟೋ ಕಾರು, ಚಾಲಕ ದಾವುಲ್ ಸಾಬ ನದಾಫ್ ಎಂಬವರ ನಿಯಂತ್ರಣ ತಪ್ಪಿರಸ್ತೆಯಿಂದ ಕೆಳಗೆ ಇಳಿದು ತಗ್ಗು ಪ್ರದೇಶಕ್ಕೆ ಮಗುಚಿ ಬಿತ್ತೆನ್ನಲಾಗಿದೆ.
ಇದರ ಪರಿಣಾಮ ಕಾರಿನಲ್ಲಿದ್ದ ಮಗು ಹೊರಗೆ ಎಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡ ಮಗು ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತೆಂದು ತಿಳಿದುಬಂದಿದೆ. ಯಾಸಿರ್ ತಂದೆ ಯಾಸಿನ್ ಶಿರಾಲಿ ನದಾಫ್ ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





