ಕೊಲ್ಯ: ಪುತ್ರ ಶೋಕ, ಮಹಿಳೆ ಆತ್ಮಹತ್ಯೆ

ಉಳ್ಳಾಲ,ಅ.22: ಪುತ್ರನ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಸೋಮೇಶ್ವರ ಕೊಲ್ಯ ನಿವಾಸಿ ನರಸಿಂಹ ಆಳ್ವ ಎಂಬವರ ಪತ್ನಿ ನೀತಾ ಆಳ್ವ(43) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.
ಇವರ ಪುತ್ರ ನಮನ್ ಆಳ್ವ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಐದು ತಿಂಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟಿದ್ದ. ಏಕೈಕ ಪುತ್ರನನ್ನು ಕಳೆದುಕೊಂಡು ಖಿನ್ನತೆ ಅನುಭವಿಸುತ್ತಿದ್ದ ನೀತಾ ಅವರು ಸೋಮವಾರ ಪತಿ ಮನೆಯಿಂದ ಹೊರ ಹೋಗಿದ್ದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





