ಫೆಲೆಸ್ತೀನ್ ವ್ಯಕ್ತಿಯನ್ನು ಕೊಂದ ಇಸ್ರೇಲ್ ಸೇನೆ

ಸಾಂದರ್ಭಿಕ ಚಿತ್ರ
ಜೆರುಸಲೇಮ್, ಅ. 22: ಪಶ್ಚಿಮ ದಂಡೆಯ ನಗರ ಹೆಬ್ರಾನ್ನಲ್ಲಿ ಇಸ್ರೇಲಿ ಸೈನಿಕರು ಫೆಲೆಸ್ತೀನ್ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಇಸ್ರೇಲ್ ಸೇನೆ ಸೋಮವಾರ ತಿಳಿಸಿದೆ.
‘‘ ‘ಕೇವ್ ಆಫ್ ದ ಪ್ಯಾಟ್ರಿಯಾರ್ಕ್ಸ್’ನ ಪಕ್ಕದಲ್ಲಿ ಫೆಲೆಸ್ತೀನ್ ವ್ಯಕ್ತಿಯೋರ್ವ ಇಸ್ರೇಲ್ ಸೈನಿಕನೊಬ್ಬನಿಗೆ ಇರಿಯಲು ಯತ್ನಿಸಿದನು. ಈ ಘಟನೆಯಲ್ಲಿ ಸೈನಿಕನಿಗೆ ಅಲ್ಪಸ್ವಲ್ಪ ಗಾಯವಾಗಿದೆ. ಆಗ ಆ ಸೈನಿಕ ಹಾಗೂ ಅಲ್ಲಿದ್ದ ಇತರ ಸೈನಿಕರು ಆಕ್ರಮಣಕಾರನತ್ತ ಗುಂಡು ಹಾರಿಸಿದರು’’ ಎಂದು ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





