Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸರ್ವಾಗಮ ಶ್ರುತಿ ಸ್ಮತಿ ಪುರಾಣ

ಸರ್ವಾಗಮ ಶ್ರುತಿ ಸ್ಮತಿ ಪುರಾಣ

ವಾರ್ತಾಭಾರತಿವಾರ್ತಾಭಾರತಿ23 Oct 2018 12:12 AM IST
share
ಸರ್ವಾಗಮ ಶ್ರುತಿ ಸ್ಮತಿ ಪುರಾಣ

ಸರ್ವಾಗಮ ಶ್ರುತಿ ಸ್ಮತಿ ಪುರಾಣ ಪಾಠಕನಾದಡೇನು?

ಸರ್ವಮಂತ್ರತಂತ್ರಸಿದ್ಧಿ ಮರ್ಮವರಿತಡೇನು?
ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ;
ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ;
ಇದೇತರ ವೀರಶೈವ ವ್ರತ;
ಇದೇತರ ಜನ್ಮಸಾಫಲ್ಯ ಅಮುಗೇಶ್ವರಲಿಂಗವೆ?
                           -ಅಮುಗೆ ರಾಯಮ್ಮ

ಎಲ್ಲ 28 ಆಗಮಗಳನ್ನು, 4 ವೇದಗಳನ್ನು, ಮನುಸ್ಮತಿಯಂಥ ಸ್ಮತಿಗಳನ್ನು, 18 ಪುರಾಣಗಳನ್ನು ಪಠಣ ಮಾಡಿದರೇನಾಯಿತು? ಎಲ್ಲ ಪ್ರಕಾರದ ಮಂತ್ರ ತಂತ್ರಗಳ ಸಾಧನೆ ಮಾಡಿದರೆ ಏನಾಯಿತು? ಇಷ್ಟಲಿಂಗದ ತ್ರಿಕಾಲ ಪೂಜೆ ಇಲ್ಲ. ಲಿಂಗಕ್ಕೆ ಮಜ್ಜನಕ್ಕೆರೆದುದ ರಿಂದ ಉಂಟಾದ ಪಾದೋದಕ ಎಂಬ ಜ್ಞಾನೋದಕದ ಮತ್ತು ಆ ಲಿಂಗಕ್ಕೆ ಅರ್ಪಿಸಿದ ಪ್ರಸಾದದ ಸೇವನೆ ಇಲ್ಲ. ಹೀಗೆ ಲಿಂಗವಂತರ ಯಾವ ಪದ್ಧತಿಯನ್ನೂ ಅನುಸರಿಸದ ವೀರಶೈವ ವ್ರತ ಇದೆಂಥದ್ದು? ಇದಾವ ಜನ್ಮಸಾಫಲ್ಯ ದೇವರೆ? ಎಂದು ಅಮುಗೆ ರಾಯಮ್ಮ ಕೇಳುತ್ತಾಳೆ.
ವೀರಶೈವ ವ್ರತಿಗಳು ಶೈವ ಮತ್ತು ವೈದಿಕ ಸಂಪ್ರದಾಯಗಳನ್ನು ಏಕಕಾಲಕ್ಕೆ ಅನುಸರಿಸುತ್ತಿದ್ದರು. ಅವರು ಲಿಂಗವಂತರ ಜೀವನ ವಿಧಾನವನ್ನು ಹೊಂದಿದ್ದಿಲ್ಲ. ವೀರಶೈವ ಎಂಬುದು ಲಿಂಗಾಯತದಂತೆ ಒಂದು ಧರ್ಮವಾಗಿದ್ದಿಲ್ಲ. ಅದು ಶೈವದ ಶಾಖೆಯೂ ಆಗಿದ್ದಿಲ್ಲ. ಅದೊಂದು ಕೇವಲ ವ್ರತವಾಗಿತ್ತು ಎಂಬುದು ಈ ವಚನದಿಂದ ಸಾಬೀತಾಗುತ್ತದೆ.
ಈ ವ್ರತವು ವೈಯಕ್ತಿಕವಾದುದಾಗಿತ್ತು. ಶೈವ ಪರಂಪರೆಗೆ ಸೇರಿದ ಯಾವುದೇ ವ್ಯಕ್ತಿ ಈ ವ್ರತವನ್ನು ಪಾಲಿಸುವುದರ ಮೂಲಕ ವೀರವ್ರತಿ ಎನಿಸಿಕೊಳ್ಳುತ್ತಿದ್ದನು. ವೀರವ್ರತಿಗಳು ಒಂದೇ ತೆರನಾದ ವ್ರತವನ್ನು ಪಾಲಿಸುತ್ತಿದ್ದಿಲ್ಲ. ಅವರು ತಮಗೆ ಬೇಕಾದ ರೀತಿಯಲ್ಲಿ ವ್ರತ ಹಿಡಿಯುತ್ತಿದ್ದರು. ಕೆಲವರು ಅನ್ಯಮತದವರನ್ನು ಸೋಲಿಸುವ ವ್ರತ ಹಿಡಿಯುತ್ತಿದ್ದರು. ಕೆಲವರು ಉಗ್ರ ವ್ರತಧಾರಿಗಳಾಗುತ್ತಿದ್ದರು. ಅವರು ಹಿಡಿಯುವ ವ್ರತಗಳಲ್ಲಿ ಕೆಲವೊಂದು ಹಿಂಸಾತ್ಮಕ ಮತ್ತು ಸ್ವಯಂ ಹಿಂಸಾತ್ಮಕವಾಗಿರುತ್ತಿದ್ದವು. ಕೆಲವೊಂದು ಸಲ ಅನ್ಯ ಮತ ಪ್ರತಿಪಾದಕರ ರುಂಡವನ್ನು ಚೆಂಡಾಡುವ ವ್ರತವನ್ನೂ ಹಿಡಿಯುತ್ತಿದ್ದರು. ಅದನ್ನು ಸಾಧಿಸಿದ ನಂತರ, ಮಣಿಹ ಪೂರೈಸಿದೆವೆಂದು ಸ್ಥಾವರಲಿಂಗದ ಮುಂದೆ ನಿಂತು ತಮ್ಮ ರುಂಡವನ್ನು ಕೊಯ್ದುಕೊಂಡು ಅದರ ಮುಂದೆ ಬೀಳುವಂತೆ ಮಾಡುತ್ತಿದ್ದರು. ಇಂಥ ಭಯಂಕರ ವ್ರತಗಳನ್ನು ಕೂಡ ವೀರಶೈವ ವ್ರತಿಗಳು ಪಾಲಿಸುತ್ತಿದ್ದರು. ಅವರಿಗೆ ವೀರವ್ರತಿಗಳು ಎಂದೂ ಕರೆಯಲಾಗುತ್ತಿತ್ತು. ಹೀಗೆ 12ನೇ ಶತಮಾನದಲ್ಲಿ ವೀರಶೈವ ಒಂದು ವ್ರತವಾಗಿತ್ತು ಮತ್ತು ಲಿಂಗಾಯತ ಒಂದು ಧರ್ಮವಾಗಿತ್ತು ಎಂಬುದು ಈ ವಚನದಿಂದ ಸಾಬೀತಾಗುತ್ತದೆ.
ನಂತರದ ಶತಮಾನಗಳಲ್ಲಿ ವೀರಶೈವ ಪದ ಲಿಂಗಾಯತಕ್ಕೆ ಸಮನಾಗಿ ಬಳಕೆಯಾಗತೊಡಗಿತು. ಕಲಿತವರು, ಶ್ರೀಮಂತರು, ಸಂಸ್ಕೃತ ಬಲ್ಲವರು ಮುಂತಾದವರು ಲಿಂಗಾಯತಕ್ಕೆ ಬದಲಾಗಿ ವೀರಶೈವ ಪದ ಬಳಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿದರು. ಆದರೆ ಬಡವರು, ನಿರಕ್ಷರಿಗಳು ಮತ್ತು ಹಳ್ಳಿಗರು ಲಿಂಗಾಯತ ಎಂದೇ ಬಳಸಿದರು. ಬಹುಪಾಲು ಧರ್ಮಗುರುಗಳು ಮತ್ತು ವಿದ್ವಾಂಸರು ತಮ್ಮನ್ನು ವೀರಶೈವರೆಂದೇ ಕರೆದುಕೊಂಡರು. ಹೀಗಾಗಿ ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ಭಾವನೆ ಮೂಡಿತು. ಗೊಂದಲ ಸೃಷ್ಟಿಯಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X