ದೇಹದಾರ್ಡ್ಯ ಮತ್ತು ಭಾರ-ಎತ್ತುವಿಕೆ ಸ್ಪರ್ಧೆ : ಶ್ರೀ ವೈಭವ ನಾಯ್ಕ್ ತೃತೀಯ

ಭಟ್ಕಳ, ಅ.23: ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಆಯೋಜಿಸಲ್ಪಟ್ಟ ದೇಹದಾರ್ಡ್ಯ ಮತ್ತು ಭಾರ-ಎತ್ತುವಿಕೆ ಸ್ಪರ್ಧೆಯಲ್ಲಿ ನಗರದ ಗುರು ಸುಧೀಂದ್ರ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿ ಶ್ರೀ ವೈಭವ ನಾಯ್ಕ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಇವರ ಈ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟೃಸ್ಟ್‍ನ ಅಧ್ಯಕ್ಷರಾದ ಡಾ.ಸುರೇಶ ವಿ. ನಾಯಕ್, ಪ್ರಾಂಶುಪಾಲರಾದ ಶ್ರೀ ನಾಗೇಶ ಎಮ್. ಭಟ್ , ಶೈಕ್ಷಣಿಕ ಸಂಯೋಜಕರಾದ ಶ್ರೀ ಫಣಿಯಪ್ಪಯ್ಯ ಹೆಬ್ಬಾರ, ದೈಹಿಕ ಶಿಕ್ಷಕರಾದ ಶ್ರೀ ವಿನಾಯಕ ನಾಯ್ಕ ಹರ್ಷ ವ್ಯಕ್ತಪಡಿಸಿರುತ್ತಾರೆ.
Next Story





