ಜಮ್ಮು-ಕಾಶ್ಮೀರ: ಶಾಲೆಗಳಲ್ಲಿ ಭಗವದ್ಗೀತೆ ಪುಸ್ತಕ ಕಡ್ಡಾಯದ ಆದೇಶ ಹಿಂದೆಗೆತ

ಸಾಂದರ್ಭಿಕ ಚಿತ್ರ
ಶ್ರೀನಗರ, ಅ.23: ಶಿಕ್ಷಣ ಸಂಸ್ಥೆಗಳು ಲೈಬ್ರೆರಿಗೆ ಭಗವದ್ಗೀತೆ ಹಾಗೂ ರಾಮಾಯಣ ಪುಸ್ತಕಗಳನ್ನು ಖರೀದಿಸಬೇಕು ಎಂಬ ಆದೇಶವನ್ನು ಜಮ್ಮು ಕಾಶ್ಮೀರ ಸರಕಾರ ಮಂಗಳವಾರ ವಾಪಸ್ ಪಡೆದಿದೆ. ಕೆಲವು ಧಾರ್ಮಿಕ ಪುಸ್ತಕಗ ಬಗ್ಗೆ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರ ಆದೇಶದಲ್ಲಿ ತಿಳಿಸಲಾಗಿದೆ.
ಭಗವದ್ಗೀತೆ ಹಾಗೂ ರಾಮಾಯಣ ಪುಸ್ತಕಗಳನ್ನು ಖರೀದಿಸಬೇಕೆಂಬ ಶಿಕ್ಷಣ ಇಲಾಖೆಯ ಆದೇಶ ಸೋಮವಾರ ಬಹಿರಂಗಗೊಂಡ ಬಳಿಕ ವ್ಯಾಪಕ ಟೀಕೆ ಎದುರಾಗಿತ್ತು. ಆದೇಶವನ್ನು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಶಾಲೆಗಳಲ್ಲಿ ಧಾರ್ಮಿಕ ಪುಸ್ತಕಗಳನ್ನು ಇರಿಸಲು ನಿರ್ಧರಿಸಿದ್ದರೆ ರಾಮಾಯಣ ಮತ್ತು ಭಗವದ್ಗೀತೆ ಪುಸ್ತಕ ಮಾತ್ರವಲ್ಲ, ಇತರ ಧಾರ್ಮಿಕ ಪುಸ್ತಕಗಳನ್ನೂ ಇಡಬೇಕು. ಇತರ ಧರ್ಮಗಳ ಬಗ್ಗೆ ನಿರ್ಲಕ್ಷವೇಕೆ ಎಂದು ಪ್ರಶ್ನಿಸಿದ್ದಾರೆ.
Next Story





