ಸ್ಥಳೀಯಾಡಳಿತ ಸಂಸ್ಥೆಗಳ ಅಲ್ಪಸಂಖ್ಯಾತ ಸದಸ್ಯರಿಗೆ ಸನ್ಮಾನ

ಉಡುಪಿ, ಅ.23: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಉಡುಪಿ ಶೋಕ ಮಾತಾ ಇಗರ್ಜಿಯ ಡಾನ್‌ಬೋಸ್ಕೊ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಉಡುಪಿ ನಗರಸಭೆ ಸದಸ್ಯೆ ಎಡ್ಲೀನ್ ಕರ್ಕಡ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯೆ ಜಾಹೀರ್ ಅಬೀಬ್, ಕುಂದಾಪುರ ಪುರಸಭೆ ಸದಸ್ಯ ಮುಹಮ್ಮದ್ ಅಶ್ಫಕ್ ಕೋಡಿ ಅವರನ್ನು ಸನ್ಮಾನಿಸಲಾಯಿತು. ಅಂಬಾಡಿ ಕ್ರೈಸ್ಟ್ ಚರ್ಚ್ ಧರ್ಮಗುರು ರೆ.ಎಡ್ವಿನ್ ಜೋಸೆಫ್, ವೇದಿಕೆ ಉಪಾಧ್ಯಕ್ಷೆ ಸೆರಿನ್ ಡೇಸಾ ಮುಖ್ಯ ಅತಿಥಿಯಾಗಿದ್ದರು.
ಇದೇ ಸಂದರ್ಭದಲ್ಲಿ ವೇದಿಕೆಯ ತ್ರೈಮಾಸಿಕ ಪತ್ರಿಕೆ ‘ಸಂಪರ್ಕ’ ಬಿಡುಗಡೆ ಮಾಡಲಾಯಿತು. ಅಧ್ಯಕ್ಷತೆಯನ್ನು ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಕೆ.ಇಬ್ರಾಹಿಂ ವಹಿಸಿದ್ದರು. ಪತ್ರಿಕೆಯ ಸಂಪಾದಕ ಡಾ.ಜೆರಾಲ್ಡ್ ಪಿಂಟೊ, ವೇದಿಕೆಯ ಮಾಜಿ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಾರ್ಲ್ಸ್ ಅಂಬ್ಲರ್ ವಂದಿಸಿದರು. ಮಾಜಿ ಅಧ್ಯಕ್ಷ ಅಲ್ಫೋನ್ಸ್ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು.





