ಡಿ.16: ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕೃತಕ ಕಾಲು ವಿತರಣಾ ಶಿಬಿರ
ಬೆಂಗಳೂರು, ಅ. 23: ಎಲೆನ್ ಮೆಡೋಸ್ ಪ್ರೋಸ್ತೆಟಿಕ್ ಹ್ಯಾಂಡ್ ಫೌಂಡೇಶನ್‌ನಿಂದ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ತಯಾರಿಸಲಾದ ಕೃತಕ ಕಾಲು-ಕೈಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ನೀಡುವ ಶಿಬಿರವನ್ನು ಬೆಂಗಳೂರಿನಲ್ಲಿ ಡಿಸೆಂಬರ್ 16ರಂದು ಆಯೋಜಿಸಿದೆ. ರೋಟರಿ ಇಂಟರ್ ನ್ಯಾಷನಲ್ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಈ ಉಚಿತ ಕೃತಕ ಕಾಲು-ಕೈ ವಿತರಣಾ ಶಿಬಿರ ಬೆಂಗಳೂರಿನ ಆದರ್ಶ ಕಾಲೇಜಿನಲ್ಲಿ ನಡೆಯಲಿದೆ.
ಉತ್ತಮ ಗುಣಮಟ್ಟದ ತೋಳು ಹಾಗೂ ಕೃತಕ ಅಂಗಗಳಾಗಿದ್ದು ಇದನ್ನು ಬಳಸುವುದು ಬಹಳ ಸುಲಭ ಮತ್ತು ಅನುಕೂಲಕರ. ಕೇವಲ 400 ಗ್ರಾಂ ತೂಕದ್ದಾಗಿದ್ದು, ಬರವಣಿಗೆ, ಊಟ ಮಾಡುವುದು, ಹಲ್ಲು ಉಜ್ಜುವುದು ಹಾಗೂ 4 ಕೆಜಿ ಭಾರವನ್ನು ಎತ್ತುವಂತಹ ದಿನನಿತ್ಯದ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಆಘಾತಕ್ಕೀಡಾದ ವ್ಯಕ್ತಿಗೆ ಇದು ಸಹಾಯ ಮಾಡುತ್ತದೆ. ಈ ಅಂಗಗಳನ್ನು ಮೊಣಕೈ ಕೆಳಗೆ 4ರಿಂದ 5 ಇಂಚು ಸ್ಟಂಪ್ ಹೊಂದಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಇದರಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಔಷಧಿ ಒಳಗೊಂಡಿಲ್ಲ. ಈ ಸಂಪೂರ್ಣ ಪ್ರಕ್ರಿಯೆಗೆ ಕೇವಲ 2 ಗಂಟೆಗಳಷ್ಟು ಜೋಡಿಸುವುದು ಮತ್ತು ತರಬೇತಿಯ ಅಗತ್ಯವಿರುತ್ತದೆ ಅಷ್ಟೇ. ಪ್ರಪಂಚದಾದ್ಯಂತ 45 ಸಾವಿರಕ್ಕಿಂತಲೂ ಹೆಚ್ಚಿನ ಜನರು ಮತ್ತು ಭಾರತದಲ್ಲಿ 11 ಸಾವಿರಕ್ಕೂ ಹೆಚ್ಚು ಜನರ ಎಲ್‌ಎನ್ -4 ಪ್ರೋ ಆರ್ಮ್‌ನ್ನು ಬಳಸುತ್ತಿದ್ದಾರೆ. ಇದರಿಂದಾಗಿ ತಾವೇ ದಿನನಿತ್ಯದ ಕಾರ್ಯಗಳನ್ನು ಮಾಡುತ್ತಾ ದಿನದಿಂದ ದಿನಕ್ಕೆ ಹೆಚ್ಚು ಸ್ವತಂತ್ರ ಜೀವನವನ್ನು ಮುನ್ನಡೆಸುವ ಮೂಲಕ ಲಾಭ ಪಡೆಯುತ್ತಿದ್ದಾರೆ. ಫ್ರೇಂಡ್ಸ್ ವೆಲ್ ಫೇರ್ ಆರ್ಗನೈಸೇಷನ್ ಬೆಂಗಳೂರಿನ ಮೂಲದ ಲಾಭರಹಿತ ಸಂಸ್ಥೆಯಾಗಿದ್ದು, 1995 ರಿಂದ ಸುಟ್ಟಗಾಯಗಳ ಸಂತ್ರಸ್ತರಿಗೆ ಮತ್ತು ಸೀಳು ತುಳಿ ರೋಗಿಗಳಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಒದಗಿಸುತ್ತಿದೆ. ಈ ಕೃತಕ ತೋಳಿನ ಅವಶ್ಯಕತೆ ಇರುವವರು ತಮ್ಮ ತೋಳಿನ ಫೋಟೋವನ್ನು ವಾಟ್ಸಾಪ್‌ನಲ್ಲಿ ಕಳುಹಿಸಬಹುದು ಅಥವಾ ಫ್ರೆಂಡ್ಸ್ ವೆಲ್ ಫೇರ್ ಆರ್ಗನೈಸೇಶನ್ ಗೆ ಸಂಪರ್ಕಿಸಬಹುದು.
91487 41707/ 98803 07780-ಇಂಗ್ಲಿಷ್-ಕನ್ನಡ-ಹಿಂದಿ, 95913 98060- ತೆಲುಗು, 98450 37385-ತಮಿಳು. ಶಿಬಿರವನ್ನು ಬೆಂಗಳೂರಿನ 5ನೆ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು ಇಲ್ಲಿ ಡಿಸೆಂಬರ್ 16ರ ಬೆಳಗ್ಗೆ 8 ಗಂಟೆಯಿಂದ ನಡೆಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.





