ಬೆಂಗಳೂರು: ಎಸ್ಸೆಸ್ಸೆಫ್ ಕಮ್ಮನಹಳ್ಳಿ ಶಾಖೆ ಯೂನಿಟ್ ಸಮ್ಮೇಳನ

ಬೆಂಗಳೂರು,ಅ.23: 'ಯೌವ್ವನ ಮರೆಯಾಗುವ ಮುನ್ನ' ಎಂಬ ಧ್ಯೇಯ ವಾಕ್ಯದೊಂದಿಗೆ ಕಮ್ಮನಹಳ್ಳಿ ಎಸ್ಸೆಸ್ಸೆಫ್ ಶಾಖೆ ವತಿಯಿಂದ ಯುನಿಟ್ ಸಮ್ಮೇಳನ ನಡೆಯಿತು.
ಕಾರ್ಯಕ್ರಮದಲ್ಲಿ ಸ್ವಾದಿಕ್ ಸಖಾಫಿ ಪ್ರಾರ್ಥನೆಗೆ ನೇತೃತ್ವ ವಹಿಸಿದರು. ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಮುನೀರ್ ಉದ್ಘಾಟನೆ ಮಾಡಿದರು. ಅನಸ್ ಸಿದ್ದೀಖಿ ಶಿರಿಯಾ ಮುಖ್ಯ ಪ್ರಭಾಷಣ ನಡೆಸಿದರು. ಸೆಯ್ಯದ್ ಶೌಕತಲಿ ಸಖಾಫಿ ಪ್ರಾರ್ಥನೆ ಮಾಡಿದರು.
ಕಾರ್ಯಕ್ರಮದಲ್ಲಿ ಸಿರಾಜ್ ಮಹಾಬಜಾರ್, ನೌಫಲ್ ಕಮ್ಮನಹಳ್ಳಿ, ಕಾಸಿಮ್, ಹನೀಫ್, ಶರೀಫ್ ಹಾಗೂ ಇನ್ನಿತರರು ಭಾಗವಹಿಸಿದರು. AR ನುಫೈಲ್ ಸ್ವಾಗತಿಸಿ, ರಝಾಕ್ ಕವನೂರು ವಂದಿಸಿದರು.
Next Story





