ಉಡುಪಿ : ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಉಡುಪಿ, ಅ.23: ಕುಂದಾಪುರ ತಾಲೂಕು ಗೋಳಿಹೊಳೆ ಅರೆಶಿರೂರಿನ ಮೂಕಾಂಬಿಕಾ ದೇಗುಲದ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಉಡುಪಿಯ ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ತ್ರಿಶಾ (100ಮೀ., 200ಮೀ., 400 ಮೀ. ಓಟ ಹಾಗೂ 100ಮೀ. ರಿಲೇಯಲ್ಲಿ ಪ್ರಥಮ), ಧ್ರುವ ಬಲ್ಲಾಳ್(100 ಮೀ. ಹಾಗೂ 200 ಮೀ.ನಲ್ಲಿ ಪ್ರಥಮ) ಮತ್ತು ರೆಬೆಕ್ಕಾ ಮರಿಯಾ ರೋಡ್ರಿಗಸ್ (ಲಾಂಗ್‌ಜಂಪ್ ದ್ವಿತೀಯ, 100ಮೀ. ರಿಲೇ ಪ್ರಥಮ) ಇವರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
Next Story





