ವರದಕ್ಷಿಣೆ ಕಿರುಕುಳ: ದೂರು ದಾಖಲು
ಕುಂದಾಪುರ, ಅ.23: ಹೆಮ್ಮಾಡಿ ಗ್ರಾಮದ ಸಂತೋಷ ನಗರದ ನಯಾಝ್ ಶರೀಫ್ ಎಂಬವರ ಪತ್ನಿ ತಾಸೀಮ್ ಬಾನು(26) ಎಂಬವರಿಗೆ ಪತಿಯ ಮನೆಯವರು ಹೆಚ್ಚುವರಿ ವರದಕ್ಷಿಣೆ ಹಣ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವ ಬಗ್ಗೆ ನ್ಯಾಯಾಲಯದ ಆದೇಶದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಖಾಸಗಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ ಜಾಮಿಯಾ ಮೊಹಲ್ಲಾದ ತಾಸೀಮ್ ಬಾನು 2010ರಲ್ಲಿ ಮದುವೆಯಾಗಿದ್ದು, ಈ ವೇಳೆ 50,000 ರೂ. ನಗದು ಹಾಗೂ 72 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು. ಮದುವೆಯ ಬಳಿಕ ತಾಸೀಮ್ ಪತಿಯ ಮನೆಯಲ್ಲಿ ವಾಸ್ತವ್ಯ ಹೊಂದಿದ್ದು, ಈ ಸಂದರ್ಭ ನಥಾರ್ ಶರೀಫ್ (62), ಶಿರೀನ್ ಬಾನು(48), ತೌಫಿಕ್ ಶರೀಫ್(28), ಆಜಾರ್ ಶರೀಫ್ (24), ನುಜಾತ್ ಬೇಗಂ(23) ಎಂಬವರು ತಾಸೀಮ್ ಬಾನುಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದರೆಂದು ದೂರಲಾಗಿದೆ. ಹೆಚ್ಚಿನ ವರದಕ್ಷಿಣೆ ತಾರದಿದ್ದರೆ ಸೀಮೆಎಣ್ಣೆಯಿಂದ ಸುಟ್ಟು ಹಾಕುವುದಾಗಿ ಬೆದರಿಕೆಯೊಡ್ಡಿ ಮನೆಯಿಂದ ಹೊರಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
Next Story





