'ಇಬ್ಬನಿ': ಸ್ವಚ್ಚ ಭೂಮಿ, ಸ್ವಚ್ಚ ಮನಸ್ಸು-ಅಭಿಯಾನ

ಸುಳ್ಯ,ಅ. 22: 'ಇಬ್ಬನಿ' ಸುಳ್ಯ ಹಮ್ಮಿಕೊಂಡುರಿವ ಸ್ವಚ್ಚ ಭೂಮಿ, ಸ್ವಚ್ಚ ಮನಸ್ಸು ಅಭಿಯಾನದ ಅಂಗವಾಗಿ ಹಿ.ಪ್ರಾ.ಶಾಲೆ ಜಟ್ಟಿಪಳ್ಳದಲ್ಲಿ ಸ್ವಚ್ಚತಾ ಕಾರ್ಯಕ್ರಮವು ಇಬ್ಬನಿ ಸುಳ್ಯ ಇದರ ಅಧ್ಯಕ್ಷ ಅಬ್ದುಲ್ ಖಾದರ್ ಜಟ್ಟಿಪಳ್ಳ ಇವರ ನೇತೃತ್ವದಲ್ಲಿ ಮಧ್ಯಾಹ್ನ 1:00 ರಿಂದ ಸಾಯಂಕಾಲ 4:30ರ ತನಕ ನಡೆಯಿತು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಯರಾದ ಶ್ರೀಮತಿ ಇಂದಿರಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಜಟ್ಟಿಪಳ್ಳ, ಜಟ್ಟಿಪಳ್ಳದ ಸ್ಥಳಿಯರಾದ ಮುಹಮ್ಮದ್ ಅಲಿ ಕೆ.ಎ, ಸತ್ಯ ನಾರಾಯಣ, ಸಮದ್ ಬಾರಿಕ್ಕಾಡ್, ಅಬ್ದುಲ್ ರಹ್ಮಾನ್ ಕೆ.ಎ, ಇಕ್ಬಾಲ್ ಸುಳ್ಯ , ಶಾಲಾ ಮಕ್ಕಳು ಹಾಗೂ ಇಬ್ಬನಿ ಸುಳ್ಯ ಇದರ ಸದಸ್ಯರು ಪಾಲ್ಗೊಂಡರು.
ಸ್ವಚ್ಚತಾ ಕಾರ್ಯಕ್ರಮದ ಕೊನೆಯಲ್ಲಿ ಉಪಾದ್ಯಕ್ಷ ಸಿಯಾದ್ ಪಾರೆ ಹಾಗೂ ಸಂಘಟನಾ ಕಾರ್ಯದರ್ಶಿ ಇರ್ಶಾದ್ ಅಹ್ಮದ್ ಇವರ ವೈಯಕ್ತಿಕ ನೆಲೆಯಲ್ಲಿ ಸರ್ವರಿಗೂ ಸಿಹಿ ಪಾನಕದ ವ್ಯವಸ್ಥೆ ಮಾಡಿದರು. ಪ್ರಧಾನ ಕಾರ್ಯದರ್ಶಿ, ಕಬೀರ್ ಲಿಮ್ರಾ ಸ್ವಾಗತಿಸಿ, ಅಬೂತ್ವಾಹಿರ್ ಪ್ರಗತಿ ವಂದಿಸಿದರು.
Next Story





