ಅ.25 ರಂದು ಮಳ್ ಹರ್ ಸ್ವಲಾತ್ ಮಜ್ಲಿಸ್
ಮಂಜೇಶ್ವರ,ಅ.23:ಮಳ್ ಹರ್ ನೂರಿಲ್ ಇಸ್ಲಾಮಿತ್ತಅ್ ಲೀಮಿಯ ಅಧೀನದಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಸಮಸ್ತ ಉಪಾದ್ಯಕ್ಷ ನಿಬ್ರಾಸುಲ್ ಉಲಮಾ ಎ.ಕೆ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಅನುಸ್ಮರಣೆಯು ಅ.25ರಂದು ಮಗ್ರಿಬ್ ನಮಾಝಿನ ನಂತರ ಮಳ್ ಹರ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಮಳ್ ಹರ್ ಉಪಾಧ್ಯಕ್ಷರಾದ ಸಯ್ಯಿದ್ ಅಬ್ದುಲ್ ರಹ್ ಮಾನ್ ಶಹೀರ್ ಅಲ್ ಬುಖಾರಿಯವರ ನೇತೃತ್ವದಲ್ಲಿ ಎಂ.ಎಸ್.ಎಂ ಅಬ್ದುರಶೀದ್ ಝೈನಿ ಅಲಿ ಕಾಮಿಲಿ ತಲಪಾಡಿ ಮುಖ್ಯ ಬಾಷಣ ಮಾಡುವರು. ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬ್, ಎ.ಕೆ ಅಬ್ದುಲ್ ವಾಹಿದ್ ಸಅದಿ ಅನುಸ್ಮರಣೆ ಭಾಷಣ ಮಾಡಲಿದ್ದಾರೆ. ಸಯ್ಯಿದ್ ಅಹ್ ಮದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ,ಸಯ್ಯಿದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ಉಜಿರೆ, ಸಯ್ಯಿದ್ ಮುಸ್ತಾಫ ಸಿದ್ದೀಖಿ ಮಂಬುರಂ, ಬಿ.ಎಸ್ ಅಬ್ದುಲ್ಲ ಕುಂಞ ಫೈಝಿ, ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿ, ಮುಾಸಲ್ ಮದನಿ ಅಲ್ ಬಿಶಾರ, ಮುಹಮ್ಮದ್ ಸಖಾಫಿ ಪಾತೂರ್, ಹಸನ್ ಸಅದಿ ಅಲ್ ಅಪ್ಳಲಿ, ಉಮರುಲ್ ಪಾರೂಖ್ ಮದನಿ ಮಚ್ಚಂಪಾಡಿ, ಅಬೂಬಕ್ಕರ್ ಸಿದ್ದೀಖ್ ಸಅದಿ ತೌಡುಗೋಳಿ, ಕೆ.ಎಂ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ, ಹಸನ್ ಕುಂಞ ಮಳ್ ಹರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





