ಕೆ.ಆರ್.ಪೇಟೆ: ಎಚ್1ಎನ್1 ಜ್ವರಕ್ಕೆ ಗೃಹಿಣಿ ಬಲಿ

ಕೆ.ಆರ್.ಪೇಟೆ, ಅ.24: ಪಟ್ಟಣದ ಉದ್ಯಮಿ, ತೊಗಟವೀರ ಸಮಾಜದ ಮುಖಂಡ ಆಟೋಪಾಟ್ರ್ಸ್ ಕೆ.ಎನ್.ಕುಮಾರ್ ಅವರ ಪತ್ನಿ ರತ್ನಮ್ಮ(40) ಅವರು ಹೆಚ್1ಎನ್1 ಜ್ವರಕ್ಕೆ ಬಲಿಯಾಗಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ರತ್ನಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‍ನ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ತಡರಾತ್ರಿ ಮೃತರಾದರು.
ಮೃತರ ನಿಧನಕ್ಕೆ ಶಾಸಕ ಡಾ.ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಸಿ.ವಾಸು, ಕೆ.ಎಚ್.ರಾಮಕೃಷ್ಣ, ಇತರ ಮುಖಂಡರು ಸಂತಾಪ ಸೂಚಿಸಿದ್ದಾರೆ.
Next Story





