ಮಟ್ಕಾ, ಜುಗಾರಿ: ಓರ್ವನ ಬಂಧನ
ಉಡುಪಿ, ಅ.24: ಮೂಡನಿಡಂಬೂರು ಗ್ರಾಮದ ಸರ್ವೀಸ್ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಹಣವಿಟ್ಟು ಮಟ್ಕಾ, ಜುಗಾರಿ ದಂಧೆ ನಡೆಸುತಿದ್ದ ಓರ್ವನನ್ನು ಉಡುಪಿ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅಲೆವೂರು ಪೆರುಪಾದೆ ಬಳಿಯ ಪಡುಅಲೆವೂರು ನಿವಾಸಿ ಸಂಜೀವ ದೇವಾಡಿಗ (62) ಬಂಧಿತ ಆರೋಪಿ.
ಈತನಿಂದ ಕೃತ್ಯಕ್ಕೆ ಬಳಸಿದ ಸೊತ್ತು ಹಾಗೂ ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿ ವಿಚಾರಣೆ ವೇಳೆ ಅಂಬಾಗಿಲನ ಲಿಯೋ ನೀಡುವ ಕಮಿಷನ್ ಆಸೆಗಾಗಿ ದಂಧೆ ನಡೆಸುತ್ತಿ ರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





