ಭೀಮಾ-ಕೋರೆಗಾಂವ್ ಪ್ರಕರಣ: ಸಿಟ್ ತನಿಖೆಗೆ ನಿರಾಕರಣೆ ವಿರುದ್ಧ ಥಾಪರ್ ಅರ್ಜಿ ಸುಪ್ರೀಂನಲ್ಲಿ ತಿರಸ್ಕೃತ

ಹೊಸದಿಲ್ಲಿ, ಅ.24: ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಐವರು ಎಡಪಂಥೀಯ ಚಿಂತಕರ ಬಂಧನಗಳಿಗೆ ಸಂಬಂಧಿಸಿದಂತೆ ಇತಿಹಾಸ ತಜ್ಞೆ ರೊಮಿಲ್ಲಾ ಥಾಪರ್ ಅವರು ಸಲ್ಲಿಸಿರುವ ಪುನರ್‌ಪರಿಶೀಲನಾ ಅರ್ಜಿಯ ತುರ್ತು ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.
ವರವರ ರಾವ್,ವೆರ್ನನ್ ಗೊನ್ಸಾಲ್ವೆಸ್,ಅರುಣ್ ಫೆರೀರಾ,ಸುಧಾ ಭಾರಧ್ವಾಜ್ ಮತ್ತು ಗೌತಮ ನವಲಾಖಾ ಅವರ ಬಂಧನಗಳ ಕುರಿತು ವಿಶೇಷ ತನಿಖಾ ತಂಡ(ಸಿಟ್)ದಿಂದ ತನಿಖೆಯನ್ನು ನಿರಾಕರಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮರುಪರಿಶೀಲನೆಗೆ ಥಾಪರ್ ಕೋರಿದ್ದರು.
ಮಹಾರಾಷ್ಟ್ರ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಲೂ ನ್ಯಾಯಾಲಯವು ಅನುಮತಿ ನೀಡಿತು.
ಸೆ.28ರಂದು ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಈ ಐವರು ಸಾಮಾಜಿಕ ಕಾರ್ಯಕರ್ತರ ಮಧ್ಯಂತರ ಗೃಹಬಂಧನಗಳನ್ನು ವಿಸ್ತರಿಸಿತ್ತು ಮತ್ತು ಬಂಧನಗಳ ಕುರಿತಂತೆ ಸಿಟ್ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು.
Next Story





