ಐಇಎಸ್, ಐಎಸ್‌ಎಸ್ ಪರೀಕ್ಷೆಯ ಸಂದರ್ಶನ ದಿನಾಂಕ ಪ್ರಕಟ
ಬೆಂಗಳೂರು, ಅ.24: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಇಂಡಿಯನ್ ಎಕಾನಾಮಿಕ್ ಸರ್ವೀಸ್ ಪರೀಕ್ಷೆ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಪರೀಕ್ಷೆಯ ಸಂದರ್ಶನ ದಿನಾಂಕವನ್ನು ಪ್ರಕಟಿಸಿದೆ.
ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಯುಪಿಎಸ್‌ಸಿ ವೆಬ್‌ಸೈಟ್‌ಗೆ ಲಾಗಿನ್ ಆಗಿ ಪರಿಶೀಲಿಸಬಹುದಾಗಿದ್ದು, 14 ಹುದ್ದೆಗಳಿಗೆ ನಡೆಯುತ್ತಿರುವ ಇಂಡಿಯನ್ ಎಕಾನಾಮಿಕ್ ಸರ್ವೀಸ್ ಪರೀಕ್ಷೆಯ ಸಂದರ್ಶನ ನ.12ರಿಂದ 14ರವರೆಗೆ ನಡೆಯಲಿದೆ. ನ.12ರಿಂದ 15ರವರೆಗೆ ಇಂಡಿಯನ್ ಸ್ಟಾಟಿಸ್ಟಿಕಲ್ ಪರೀಕ್ಷೆಯ ಸಂದರ್ಶನ ನಡೆಯಲಿದೆ. ಇವುಗಳಿಗೆ ಯುಪಿಎಸ್‌ಸಿಯಿಂದ ಜೂ.29ರಂದು ಪರೀಕ್ಷೆ ನಡೆದಿತ್ತು. ಆಯೋಗವು ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯಿಂದ ಸಂದರ್ಶನ ದಿನಾಂಕ ಖಚಿತಪಡಿಸಿಕೊಳ್ಳಬಹುದು.
ಯುಪಿಎಸ್‌ಸಿ ವೆಬ್‌ಸೈಟ್‌ಗೆ ಲಾಗಿನ್ ಆಗಿ ಇಂಡಿಯನ್ ಎಕಾನಾಮಿಕ್ ಸರ್ವೀಸ್ ಎಕ್ಸಾಮಿನೇಶನ್ 2018 ಹಾಗೂ ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಎಕ್ಸಾಮಿನೇಶನ್ 2018 ದಿನಾಂಕದ ಲಿಂಕ್ ಮೇಲೆ ಕ್ಲಿಕ್ ಮಾಡಿದಲ್ಲಿ ಸ್ಕ್ರೀನ್ ಮೇಲೆ ಪಿಡಿಎಫ್ ಫೈಲ್ ಮೂಡುತ್ತದೆ. ಅದರಲ್ಲಿ ಸಂದರ್ಶನ ದಿನಾಂಕದ ಕುರಿತು ಸಂಪೂರ್ಣ ಮಾಹಿತಿ ದೊರೆಯಲಿದೆ.





