ಮಂಗ ಓಡಿಸುವ ಭರದಲ್ಲಿ ಕೆರೆಗೆ ಬಿದ್ದು ಬಾಲಕ ಮೃತ್ಯು
ಕುಂದಾಪುರ, ಅ.24: ತೋಟಕ್ಕೆ ನುಗ್ಗಿದ ಮಂಗಗಳನ್ನು ಓಡಿಸುವ ಭರದಲ್ಲಿ ತೋಟದಲ್ಲಿದ್ದ ಆವರಣವಿಲ್ಲದ ಕೆರೆಗೆ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ಕರ್ಕುಂಜೆ ಗ್ರಾಮದ ನೇರಳಕಟ್ಟೆಯಿಂದ ವರದಿಯಾಗಿದೆ.
ನೇರಳಕಟ್ಟೆಯ ಶಂಕರನಿಲಯದ ರಾಜೀವ ಶೆಟ್ಟಿ ಎಂಬವರ ಪುತ್ರ ಕಿರಣ (16) ಮೃತ ಬಾಲಕ. ಇವರ ಮನೆಯ ಪಕ್ಕದಲ್ಲೇ ಇರುವ ಸಂಬಂಧಿ ರತ್ನಾಕರ ಶೆಟ್ಟಿ ಎಂಬವರ ಮನೆಯ ತೋಟಕ್ಕೆ ಮಂಗಗಳು ಮಂಗಳವಾರ ಬೆಳಗ್ಗೆ ನುಗ್ಗಿದ್ದು, ಇದನ್ನು ಓಡಿಸುವ ಭರದಲ್ಲಿ ಕಿರಣ, ತೋಟದಲ್ಲಿದ್ದ ಆವರಣವಿಲ್ಲದ ಕೆರೆಗೆ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಇಂದು ಬೆಳಗ್ಗೆ ಮಗನಿಗಾಗಿ ರಾಜೀವ ಶೆಟ್ಟಿ ಅವರು ಹುಡುಕುತ್ತಾ, ರತ್ನಾಕರ ಶೆಟ್ಟಿ ಅವರ ತೋಟದ ಕೆರೆಗೆ ಬಳಿ ಬಂದಾಗ ಅಲ್ಲಿ ಮೃತದೇಹ ಕಂಡುಬಂದಿತ್ತು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





