ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಮಂಗಳೂರು, ಅ.24: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಯನ್ನು ಜಂಟಿ ಪಾರ್ಲಿಮೆಂಟರಿ ಸಮಿತಿಗೆ (ಜೆಪಿಸಿ) ವಹಿಸಬೇಕು ಎಂದು ಆಗ್ರಹಿಸಿ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಕ್ರಾಂತಿಗೀತೆ ಮತ್ತು ಘೋಷಣೆಗಳೊಂದಿಗೆ ಪ್ರಾರಂಭವಾದ ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿದರು.
ಸಿಪಿಐ ನಾಯಕರಾದ ಕೆ.ವಿ. ಭಟ್, ಪ್ರಭಾಕರ ರಾವ್, ಆರ್.ಡಿ. ಸೋನ್ಸ್, ಬಾಬು ಭಂಡಾರಿ, ಕರುಣಾಕರ, ಶಿವಪ್ಪ, ಸರಸ್ವತಿ, ಸುಲೋಚನಾ, ಭಾರತಿ ಪಾಲ್ಗೊಂಡಿದ್ದರು.
ಸುರೇಶ್ ಬಂಟ್ವಾಳ್ ಸ್ವಾಗತಿಸಿದರು. ಬಿ. ಶೇಖರ ವಂದಿಸಿದರು.
Next Story





