2019ರ ಸಾಲಿನ ಹಜ್ ಅರ್ಜಿ ಫಾರಂ ಬಿಡುಗಡೆ

ಮಂಗಳೂರು, ಅ.24: 2019ನೆ ಸಾಲಿನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಜ್ ಯಾತ್ರಾರ್ಥಿಗಳಿಗೆ ಅರ್ಜಿ ಫಾರಂನ್ನು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ.ಕಣಚೂರು ಮೋನು ದ.ಕ.ಜಿಲ್ಲಾ ವಕ್ಫ್ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಮುಂದಿನ ವರ್ಷ ಹಜ್ ಯಾತ್ರೆ ಕೈಗೊಳ್ಳುವ ಬಂದರ್ ಝೀನತ್ ಭಕ್ಷ್ ಜುಮ್ಮಾ ಮಸೀದಿಯ ಖತೀಬ್ ಸದಕತ್ತುಲಾ ಫೈಝಿ ಅವರಿಗೆ ಹಜ್ ಅರ್ಜಿ ಫಾರಂನ ಮೊದಲ ಪ್ರತಿ ನೀಡಿದರು.
ಬಳಿಕ ಮಾತನಾಡಿದ ಕಣಚೂರು ಮೋನು ಹಜ್‌ಯಾತ್ರೆಯು ಸುಖ ಹಾಗೂ ಸಮೃದ್ಧಿಯಿಂದ ಕೂಡಲಿ ಎಂದು ಹಾರೈಸಿದರು.
ಈ ಸಂದರ್ಭ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಹನೀಫ್ ಖಾನ್ ಕೊಡಾಜೆ, ಮಕ್ಬೂಲ್ ಇಂಜಿನಿಯರ್, ಮುಹಮ್ಮದ್ ಹಾರಿಸ್, ಮಝರುದ್ದೀನ್ ಇಂಜಿನಿಯರ್ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕ್ಕರ್ ಸ್ವಾಗತಿಸಿ, ವಂದಿಸಿದರು.
ಹಜ್ ಯಾತ್ರಾರ್ಥಿಗಳ ಗಮನಕ್ಕೆ
ಅರ್ಜಿಯೊಂದಿಗೆ ಶುಲ್ಕ 300ರೂ.ವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು. ಗ್ರೀನ್ ವಿಭಾಗಕ್ಕೆ ಪ್ರಥಮ ಕಂತು 88,238 ರೂ ಮತ್ತು ದ್ವಿತೀಯ ಕಂತು 1,88,605 ರೂ. ಸಹಿತ ಒಟ್ಟು 2,76,843 ರೂ. ಆಗಿದೆ. ಅಝೀಝಿಯ ವಿಭಾಗಕ್ಕೆ ಪ್ರಥಮ ಕಂತು 88,238 ರೂ. ಮತ್ತು ದ್ವಿತೀಯ ಕಂತು 1,53,841 ರೂ. ಸಹಿತ ಒಟ್ಟು 2,42,079 ರೂ. ಆಗಿರುತ್ತದೆ.
ಅರ್ಜಿ ಸಲ್ಲಿಸಲು 2018ರ ನವೆಂಬರ್ 17 ಕೊನೆಯ ದಿನವಾಗಿರುತ್ತದೆ. ಪಾಸ್‌ಪೋರ್ಟ್‌ನ ಅವಧಿಯ ದಿನಾಂಕವು 31.01.2020 ಆಗಿರಬೇಕು. ಒಂದು ಕವರಿನಲ್ಲಿ 5 ಮಂದಿಗೆ ಮಾತ್ರ ಅವಕಾಶ ವಿರಲಿದೆ ಎಂದು ಪ್ರಕಟನೆ ತಿಳಿಸಿದೆ.







