ಪಿಎಫ್‍ಐ ವತಿಯಿಂದ ಜನಾರೋಗ್ಯವೇ ರಾಷ್ಟ್ರಶಕ್ತಿ ಮ್ಯಾರಾಥಾನ್, ಸ್ವಚ್ಚತಾ ಕಾರ್ಯಕ್ರಮ

ಪುತ್ತೂರು, ಅ. 24: ಪಾಪ್ಯುಲರ್ ಫ್ರಂಟ್ ಸವಣೂರು ಡಿವಿಷನ್ ವತಿಯಿಂದ ಜನಾರೋಗ್ಯವೇ ರಾಷ್ಟ್ರಶಕ್ತಿಯ ಅಂಗವಾಗಿ ಮ್ಯಾರಾಥಾನ್ ಹಾಗೂ ಸ್ವಚ್ಚತಾ ಕಾರ್ಯಕ್ರಮ ಬುಧವಾರ ಸವಣೂರಿನಲ್ಲಿ ನಡೆಯಿತು.
ಪಿಎಫ್‍ಐ ಪುತ್ತೂರು ಜಿಲ್ಲಾಧ್ಯಕ್ಷ ಅಬೂಬಕ್ಕರ್ ರಿಝ್ವಾನ್ ಇಲ್ಲಿನ ಅಂಬೇಡ್ಕರ್ ಭವನದ ಬಳಿಯಲ್ಲಿ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಮ್ಯಾರಾಥಾನ್ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎಫ್‍ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಅವರು ಯುವಜನತೆಯ ಉತ್ತಮ ಆರೋಗ್ಯಕ್ಕಾಗಿ ಪ್ರತಿವಾರವೂ ಪಿಎಫ್‍ಐ ವತಿಯಿಂದ ಯೋಗ ಅಭ್ಯಾಸ ಮಾಡಲಾಗಿತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಧಕ ಶಫೀಕ್ ಶಾಂತಿನಗರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಿಎಫ್‍ಐ ಸವಣೂರು ಡಿವಿಷನ್ ಅಧ್ಯಕ್ಷ ಸಿದ್ದೀಕ್ ಅಲೆಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಮಹಮ್ಮದ್ ಹಾಜಿ ಕಣೆಮಜಲು, ಜಮಾಅತ್ ಕಮಿಟಿ ಸದಸ್ಯರಾದ ಉಮ್ಮರ್ ಹಾಜಿ ಕೆನರಾ, ಉಮ್ಮರ್ ಜನತಾ, ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‍ನ ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ, ಎಸ್‍ಕೆಎಸ್‍ಎಸ್‍ಎಫ್ ಸವಣೂರು ವಲಯ ಕೋಶಾಧಿಕಾರಿ ಅಬ್ದುಲ್ ಕರೀಂ ಮೌಲವಿ, ಎಸ್‍ಡಿಪಿಐ ಸುಳ್ಯ ವಿಧಾನ ಸಭಾ ಸಮಿತಿ ಅಧ್ಯಕ್ಷ ರಫೀಖ್ ಎಂ.ಎ, ಕಾರ್ಯದರ್ಶಿ ಬಾಬು ಎನ್ ಸವಣೂರು, ವಲಯ ಅಧ್ಯಕ್ಷ ರಝಾಕ್ ಅಂಕತ್ತಡ್ಕ, ಕಾರ್ಯದರ್ಶಿ ಅಶ್ರಫ್ ಜನತಾ, ಎಸ್‍ಡಿಎಯು ಪುತ್ತೂರು ಅಧ್ಯಕ್ಷ ಮಹಮ್ಮದ್ ಕುಂಞಿ ಬಾಬಾ, ಅಲ್‍ನೂರು ಮುಸ್ಲಿಂ ಯೂತ್ ಫಡರೇಶನ್ ಸದಸ್ಯ ಎಸ್.ಕೆ. ರಝಾಕ್, ರಿಫಾಯಿಯ್ಯ ದಫ್ ಕಮಿಟಿ ಆದು ಹಾಜಿ ಸೋಂಪಾಡಿ ಮತ್ತಿತರರು ಉಪಸ್ಥಿತರಿದ್ದರು.







