ಯುನೆಸ್ಕೊ ನಿರ್ಣಯ ಜಾರಿಗೆ ಜೋರ್ಡಾನ್ ದೊರೆಗೆ ಒತ್ತಾಯ
ಅಮ್ಮಾನ್, ಅ. 24: ಜೆರುಸಲೇಮ್ ನಗರಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೊ) ಅಂಗೀಕರಿಸಿದ ನಿರ್ಣಯಗಳನ್ನು ಜಾರಿಗೊಳಿಸುವ ಹೊಣೆಗಾರಿಕೆಯನ್ನು ಇಸ್ರೇಲ್ ಮೇಲೆ ವಿಧಿಸಲು ಫೆಲೆಸ್ತೀನ್ ಅಧ್ಯಕ್ಷ ಮತ್ತು ವಿಶ್ವಸಂಸ್ಥೆ ನಡುವೆ ಸಮನ್ವಯ ಏರ್ಪಡಿಸುವಂತೆ ಜೆರುಸಲೇಮ್‌ನ ಧಾರ್ಮಿಕ ಮತ್ತು ರಾಜಕೀಯ ನಾಯಕರು ಜೋರ್ಡಾನ್ ದೊರೆಯನ್ನು ಒತ್ತಾಯಿಸಿದ್ದಾರೆ.
ಜೆರುಸಲೇಮ್‌ನ ಮುಸ್ಲಿಮ್ ಮತ್ತು ಕ್ರೈಸ್ತ ಪವಿತ್ರ ತಾಣಗಳ ಉಸ್ತುವಾರಿ ಹೊತ್ತಿರುವ ದೊರೆ ಅಬ್ದುಲ್ಲಾರಿಗೆ ಈ ನಾಯಕರು ಬರೆದ ಬಹಿರಂಗ ಪತ್ರದಲ್ಲಿ ಈ ಬೇಡಿಕೆಯನ್ನು ಇಡಲಾಗಿದೆ.
‘‘ಯುನೆಸ್ಕೊದ ಸತ್ಯಶೋಧನಾ ತಂಡ ಜೆರುಸಲೇಮ್‌ಗೆ ಬರುವುದು ತುಂಬಾ ತಡವಾದರೆ, ದಾಖಲಿಸಲು ಅದಕ್ಕೆ ಏನೂ ಸಿಗಲಾರದು’’ ಎಂದು ಅವರು ಹೇಳಿದ್ದಾರೆ.
Next Story





