ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಪ್ಲೇ -ಆಫ್ ಸುತ್ತಿಗೆ ರಿತು ಮಲಿಕ್
ಸಾಕ್ಷಿಗೆ ಸೋಲು

ಬುಡಾಪೆಸ್ಟ್(ಹಂಗೇರಿ), ಅ.24:ಯುವ ಕುಸ್ತಿತಾರೆ ರಿತು ಮಲಿಕ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ಕಂಚಿನ ಪದಕಕ್ಕಾಗಿ ಪ್ಲೇ-ಆಫ್ ಸುತ್ತಿಗೆ ತಲುಪಿದ್ದಾರೆ. ಆದರೆ, ಸಾಕ್ಷಿ ಮಲಿಕ್, ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದಾರೆ.
ರಿತು ಮಲಿಕ್ ರಿಪಿಚೇಜ್ ಸುತ್ತಿನಲ್ಲಿ ಬಲ್ಗೇರಿಯದ ಸೊಫಿಯಾ ರಿಸ್ಟೋವಾರನ್ನು 9-8 ಅಂತರದಿಂದ ಸೋಲಿಸಿದರು. ರಿತು ಪ್ಲೇ-ಆಫ್‌ನಲ್ಲಿ ಈ ವರ್ಷದ ವಿಶ್ವಕಪ್ ಚಾಂಪಿಯನ್ ಜಪಾನ್‌ನ ಅಯಾನಾ ಗೆಂಪಿ ಅವರನ್ನು ಎದುರಿಸಲಿದ್ದಾರೆ.
ಸಾಕ್ಷಿ ಮಲಿಕ್ 62 ಕೆಜಿ ತೂಕ ವಿಭಾಗದಲ್ಲಿ ಜಪಾನ್‌ನ ಯುಕಾಕೊ ಕವೈ ವಿರುದ್ಧ 2-16 ಅಂತರದಿಂದ ಹೀನಾಯವಾಗಿ ಸೋತರು. 50 ಕೆಜಿ ತೂಕ ವಿಭಾಗದಲ್ಲಿ ರಿತು ಫೋಗಟ್ 2017ರ ವಿಶ್ವ ಚಾಂಪಿಯನ್ ಯು ಸುಸಾಕಿ ವಿರುದ್ಧ ಸೋತಿದ್ದಾರೆ.
ಪಿಂಕಿ(53 ಕೆಜಿ)ಪೊಲೆಂಡ್‌ನ ಕ್ರಾವ್‌ಝಿಕ್ ವಿರುದ್ಧ ಕ್ವಾ.ಫೈನಲ್ ಪಂದ್ಯವನ್ನು 2-7 ರಿಂದಲೂ, ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಪೂಜಾ ಧಾಂಡಾ ಚೀನಾದ ನಿಂಗ್‌ನಿಂಗ್ ರಾಂಗ್ ವಿರುದ್ಧ 3-4 ಅಂತರದಿಂದ ಸೋತಿದ್ದಾರೆ.
Next Story





