ವಾಮನ್ ಮೆಶ್ರಮ್ ಬಂಧನಕ್ಕೆ ಪಿಎಫ್‌ಐ ಖಂಡನೆ
ಮಂಗಳೂರು, ಅ.25: ಭಾರತ್ ಮುಕ್ತಿ ಮೋರ್ಚಾ ಮತ್ತು ಬಿಎಎಂಸಿಇಎಫ್ ನಾಯಕ ವಾಮನ್ ಮೆಶ್ರಮ್‌ರನ್ನು ಅಹ್ಮದಾಬಾದ್‌ನಲ್ಲಿ ಅಕ್ರಮವಾಗಿ ಬಂಧಿಸಿರುವ ಪೊಲೀಸರ ಕ್ರಮವನ್ನು ಪಿಎಫ್‌ಐ ಖಂಡಿಸಿದೆ.
ಬಹುಜನ ಕ್ರಾಂತಿ ಮೋರ್ಚಾ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆಯ ಭಾಗವಾಗಿ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ್ದಲ್ಲದೆ ಪೊಲೀಸರು ವಾಮನ್ ಮೆಶ್ರಮ್‌ರನ್ನು ಬಂಧಿಸಿದ್ದಾರೆ. ಇದು ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಘಟಿಸುವ ಸ್ವಾತಂತ್ರ್ಯದ ನೇರ ಉಲ್ಲಂಘನೆ ಯಾಗಿದೆ. ಈ ಘಟನೆಯು ಬಹುಜನ ಸಮಾಜದ ವಿರುದ್ಧ ಬಿಜೆಪಿ ನಡೆಸುತ್ತಿರುವ ಹಿಂದುತ್ವ ದ್ವೇಷ ರಾಜಕೀಯದ ಮತ್ತೊಂದು ದೃಷ್ಟಾಂತವಾಗಿದೆ ಎಂದು ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ. ಮುಹಮ್ಮದ್ ಅಲಿ ಜಿನ್ನಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story





