ಬ್ಯಾಂಕ್ ನೌಕರರ ವೇತನ ವಂಚನೆ: ಮೂವರ ಬಂಧನ

ಬೆಂಗಳೂರು, ಸೆ.25: ಖಾಸಗಿ ಕಂಪನಿಯೊಂದರ ನೌಕರರ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕಸ್ಟಮರ್ ಕೇರ್ ಕೇಂದ್ರದ ಮೂಲಕ ಬದಲಾಯಿಸಿ ನೌಕರರ ವೇತನವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದ ಆರೋಪದ ಮೇಲೆ ಕೋರಮಂಗಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪ್ರಶಾಂತ್ ರಾಮು, ಪ್ರಶಾಂತ್ ಕುಮಾರ್, ಸೈಯದ್ ಸುಲೈಮಾನ್ ಬಂಧಿತರು. ಆರೋಪಿಗಳು ಕೋರಮಂಗಲದ 6ನೆ ಬ್ಲಾಕ್‌ನಲ್ಲಿರುವ ಪ್ರತಿಷ್ಠಿತ ಟೀಮ್‌ಲೀಸ್ ಸರ್ವೀಸ್ ಲಿಮಿಟೆಡ್ ಎಂಬ ಕಂಪನಿಯ ಸುಮಾರು 10 ಮಂದಿ ನೌಕರರ ಏಪ್ರಿಲ್ ತಿಂಗಳ ವೇತನ10 ಲಕ್ಷ ರೂ.ವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು.
ಈ ಬಗ್ಗೆ ಹಣ ಕಳೆದುಕೊಂಡ ನೌಕರರು ದೂರು ನೀಡಿದ್ದರು. ತನಿಖೆ ಕೈಗೊಂಡ ಕೋರಮಂಗಳ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





