ಅ.30ಕ್ಕೆ ರಾಜ್ಯ ಮಟ್ಟದ ಕಾರ್ಮಿಕ ಸಮಾವೇಶ
ಬೆಂಗಳೂರು, ಅ. 25: ಜ.8ರಿಂದ ಎರಡು ದಿನಗಳವರೆಗೆ ನಡೆಯಲಿರುವ ರಾಷ್ಟ್ರೀಯ ಮುಷ್ಕರ ಹಿನ್ನೆಲೆ ಅ.30ರ ಬೆಳಗ್ಗೆ 11ಕ್ಕೆ ಶಿಕ್ಷಕರ ಸದನದಲ್ಲಿ ‘ರಾಜ್ಯ ಮಟ್ಟದ ಕಾರ್ಮಿಕ ಸಮಾವೇಶವನ್ನು’ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಿಳಿಸಿದೆ.
ಗುರುವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಶಾಮಣ್ಣ ಮಾತನಾಡಿ, ಕಳೆದ ನಾಲ್ಕುವರೆ ವರ್ಷದಿಂದ ಅಧಿಕಾರ ನಡೆಸುತ್ತಿರುವ ಮೋದಿ ಸರಕಾರ ಜನರಿಗೆ ಹಲವು ಭರವಸೆ ನೀಡಿ ನುಡಿದಂತೆ ನಡೆಯದೆ ಮೋಸ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ರಕ್ಷಣೆ ವಿಷಯದಲ್ಲಿ ಕಾರ್ಪೊರೇಟ್ ವಲಯಕ್ಕೆ ಸಂಪೂರ್ಣ ಶರಣಾಗಿರುವ ಕೇಂದ್ರ ಸರಕಾರ ರಫೇಲ್ ವಿಮಾನ ಖರೀದಿ ಒಪ್ಪಂದದಲ್ಲಿ ವಿಮಾನ ತಯಾರಿಕೆಯಲ್ಲಿ ಏನೇನು ಅನುಭವವಿಲ್ಲದ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಗೆ ಗುತ್ತಿಗೆ ನೀಡಿ ರಕ್ಷ್ಷಣಾ ವ್ಯವಸ್ಥೆಯಲ್ಲಿ ಲೋಪವೆಸಗಿದೆ. ಹೀಗಾಗಿ, ದೇಶದ 11ರಾಷ್ಟ್ರೀಯ ಸಂಘಟನೆಗಳು ಜನವರಿ 8 ಮತ್ತು 9 ರಂದು ರಾಷ್ಟ್ರೀಯ ಮುಷ್ಕರ ನಡೆಸಲು ತೀರ್ಮಾನಿಸಿದೆ. ಇದರ ಸಿದ್ಧತೆಗಾಗಿ ಸಮಾವೇಶ ನಡೆಸಲಾಗುತ್ತಿದೆ ಎಂದರು.







