ಮೂಡುಬಿದಿರೆ: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

ಭವ್ಯಾ
ಮೂಡುಬಿದಿರೆ, ಅ. 25: ವಿವಾಹಿತ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.
ಮಾರ್ಪಾಡಿ ಗ್ರಾಮದ ಪೊನ್ನೆಚಾರಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಭವ್ಯಾ (26) ಮತ್ತು ಇವರ ಮಕ್ಕಳಾದ 5 ವರ್ಷ ಪ್ರಾಯದ ರೇವತಿ ಮತ್ತು 3 ವರ್ಷ ಪ್ರಾಯದ ಜ್ಯೋತಿ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ. 20 ರಂದು ಭವ್ಯಾ ಆಕೆಯ ಮನೆಯಿಂದ ತನ್ನಿಬ್ಬರು ಮಕ್ಕಳೊಂದಿಗೆ ಕಾಸರಗೋಡಿನಲ್ಲಿರುವ ತನ್ನ ತವರು ಮನೆಗೆಂದು ಬೆಳಗ್ಗೆ 6 ಗಂಟೆಗೆ ಹೊರಟಿದ್ದು, ಅತ್ತ ತವರು ಮನೆಗೂ ಹೋಗದೆ ಇತ್ತ ಇಲ್ಲಿಗೂ ಬಾರದೆ ಕಾಣೆಯಾಗಿದ್ದಾರೆ ಎಂದು ಆಕೆಯ ಪತಿ ವಿನೋದ್ ಸಹಾನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಮನೆಯಿಂದ ಹೊರಡುವಾಗ ಭವ್ಯಾ ಬಿಳಿ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಮಕ್ಕಳಿಬ್ಬರು ಕೆಂಪು ಮತ್ತು ಹಳದಿ ಬಣ್ಣದ ಫ್ರಾಕ್ ಹಾಗೂ ಬಿಳಿ ಬಣ್ಣದ ಚಡ್ಡಿಯನ್ನು ಧರಿಸಿದ್ದರು. ಹಿಂದಿ ಮಾತೃ ಭಾಷೆಯವರಾಗಿದ್ದ ಭವ್ಯಾ ಕನ್ನಡ, ತುಳು, ಹಿಂದಿ, ಮಲೆಯಾಳಂ ಮತ್ತು ಮಕ್ಕಳು ಕೇವಲ ಹಿಂದಿ ಭಾಷೆ ಮಾತ್ರ ಮಾತನಾಡುತ್ತಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ನಾಪತ್ತೆಯಾದವರ ಗುರುತು ಪತ್ತೆಯಾದವರು ಪೊಲೀಸ್ ಆಯುಕ್ತರು ಮಂಗಳೂರು ಇವರ ಕಛೇರಿಯನ್ನು ಅಥವಾ ಮೂಡುಬಿದಿರೆ ಠಾಣೆಯನ್ನು ಸಂಪರ್ಕಿ ಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆ: 0824-2220801 ಅಥವಾ 08258-236333 ಯನ್ನು ಸಂಪರ್ಕಿಸಬಹುದು.







