ದಿಲ್ಲಿಯ ತನ್ನ ಕಚೇರಿಯನ್ನು ಭಾರತದ ಸಾಂಸ್ಕೃತಿಕ ಪರಂಪರೆಗೆ ಅರ್ಪಿಸಿದ ವಿಶ್ವಸಂಸ್ಥೆವ

ಹೊಸದಿಲ್ಲಿ,ಅ.25: ಹೊಸದಿಲ್ಲಿಯಲ್ಲಿರುವ ತನ್ನ ಪ್ರತಿಷ್ಠಿತ ಕಚೇರಿಯನ್ನು ವಿಶ್ವಸಂಸ್ಥೆಯು ಭಾರತದ ಸಾಂಸ್ಕೃತಿಕ ಪರಂಪರೆಗೆ ಅರ್ಪಿಸುತ್ತಿರುವುದಾಗಿ ಘೋಷಿಸಿದೆ. ಬುಧವಾರ ದಿಲ್ಲಿಯಲ್ಲಿ ನಡೆದ ವಿಶ್ವಸಂಸ್ಥೆ ದಿನಾಚರಣೆಯ ಸಂದರ್ಭದಲ್ಲಿ ದೇಶದ ಸ್ಪಶ್ಯ ಮತ್ತು ಅಸ್ಪಶ್ಯ ಪರಂಪರೆಯ ಅಭೂತಪೂರ್ವ ಪ್ರದರ್ಶನ ನಡೆದ ಸಂದರ್ಭದಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.
ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಶ್ಲಾಘಿಸಿದ ವಿಶ್ವಸಂಸ್ಥೆಯ ಭಾರತೀಯ ವಿಭಾಗದ ನಿವಾಸಿ ಸಂಯೋಜಕ ಯುರಿ ಅಫನಸೆವ್, ನಾನು ವೈಯಕ್ತಿಕವಾಗಿ ಭಾರತ, ಅದರ ರುಚಿ, ಬಣ್ಣ , ಶಬ್ಧ ಮತ್ತು ಪರಿಮಳ ಹಾಗೂ ಆಹಾರದ ಜೊತೆ ಪ್ರೀತಿಯ ಒಡನಾಟ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಭವನವನ್ನು 70 ದಶಕಗಳಷ್ಟು ಹಳೆಯ ಭಾರತ-ವಿಶ್ವಸಂಸ್ಥೆಯ ಸಂಬಂಧ ಮತ್ತು ವಿಶ್ವಸಂಸ್ಥೆಗೆ ಭಾರತ ನೀಡುರುವ ಮಹತ್ವದ ಕಾಣಿಕೆಗಳ ಇತಿಹಾಸವನ್ನು ಸುರಕ್ಷಿತವಾಗಿಡುವ ತಾಣವಾಗಿ ರೂಪಿಸಲಾಗಿದೆ. ನಮ್ಮ ಆವರಣವನ್ನು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯಮಯ ಬಹುತ್ವದ ಅಭಿವೃದ್ದಿಯ ಸಂಪ್ರದಾಯಕ್ಕೆ ಅರ್ಪಿಸಲು ನಮಗೆ ಹೆಮ್ಮೆಯಾಗುತ್ತಿದೆ ಎಂದು ಅಫನಸೆವ್ ತಿಳಿಸಿದ್ದಾರೆ.





