ಮಂಡ್ಯ: ಬೈಕ್ ಢಿಕ್ಕಿ; ಪಾದಚಾರಿ ಮೃತ್ಯು

ಮಂಡ್ಯ, ಅ.25: ಬೈಕ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕು ಮಾದರಹಳ್ಳಿ ಬಳಿ ಬುಧವಾರ ರಾತ್ರಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಲಿಂಗರಾಜಿಪುರ ಗ್ರಾಮದ ಮಹದೇವಶೆಟ್ಟಿ(55) ಸಾವನ್ನಪ್ಪಿದವರು. ಇವರು ಅಡಕೆ ಕೀಳಲು ಮಾದರಹಳ್ಳಿಗೆ ಬಂದಿದ್ದರು ಎನ್ನಲಾಗಿದೆ.
ರಾತ್ರಿ ಊಟ ಮಾಡುವ ಸಲುವಾಗಿ ರಸ್ತೆಪಕ್ಕದ ಹೊಟೇಲ್‍ಗೆ ತೆರಳುತ್ತಿದ್ದಾಗ ಮಂಡ್ಯ ಕಡೆಯಿಂದ ಬಂದ ಬೈಕ್ ಢಿಕ್ಕಿಹೊಡೆಯಿತು ಎನ್ನಲಾಗಿದೆ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





