ಹನೂರು: ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

ಹನೂರು,ಅ.25: ಅಕ್ರಮವಾಗಿ ಬೆಳೆಯ ಮಧ್ಯೆ ಗಾಂಜಾ ಗಿಡವನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸಿ, ಗಾಂಜಾ ವಶಪಡಿಸಿಕೊಂಡಿರುವ ಘಟನೆ ಮಲೈಮಹದೇಶ್ವರ ಬೆಟ್ಟ ಪೋಲಿಸರ ಠಾಣೆಯಲ್ಲಿ ವರದಿಯಾಗಿದೆ .
ತಾಲೂಕಿನ ದೊಡ್ಡಾನೆ ಗ್ರಾಮ ಸಮೀಪದ ತೋಕೆರೆಯ ನಿವಾಸಿ ಮುರುಗ ಬಂಧಿತ ಆರೋಪಿ. ಈತ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಫಸಲಿನ ಮಧ್ಯೆ ಅಕ್ರಮವಾಗಿ ಗಾಂಜಾವನ್ನು ಬೆಳೆದಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ಅವರ ಮಾರ್ಗದರ್ಶನದಲ್ಲಿ ಮ.ಮ ಬೆಟ್ಟ ಪೋಲಿಸರು ಜಮೀನಿನ ಮೇಲೆ ದಾಳಿ ನಡೆಸಿ 52 ಗಾಂಜಾ ಗಿಡವನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಸಂಬಂಧ ಮ.ಮ ಬೆಟ್ಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವೇಳೆ ಇನ್ಸ್ ಪೆಕ್ಟರ್, ಸಿಬ್ಬಂದಿಗಳಾದ ಮಹೇಶ್ ದೊರೆಸ್ವಾಮಿ, ನಂಜುಂಡಸ್ವಾಮಿ, ಮಾದೇಶ್ ಇನ್ನಿತರರು ಇದ್ದರು.
Next Story





