ಸೈನಾ, ಶ್ರೀಕಾಂತ್ ಕ್ವಾ.ಫೈನಲ್‌ಗೆ
ಫ್ರೆಂಚ್ ಓಪನ್

ಪ್ಯಾರಿಸ್, ಅ.25: ಮೂರು ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾಂತ್ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಇಲ್ಲಿ ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ ಜಪಾನ್‌ನ ನೊರೊಮಿ ಒಕುಹರಾರನ್ನು 10-21, 21-14, 21-17 ಗೇಮ್‌ಗಳಿಂದ ಮಣಿಸಿದರು. ಸೈನಾ ಮುಂದಿನ ಸುತ್ತಿನಲ್ಲಿ ವಿಶ್ವ ನಂ.1 ಆಟಗಾರ್ತಿ ತೈ ಝು ಯಿಂಗ್‌ರನ್ನು ಎದುರಿಸಲಿದ್ದಾರೆ. ಹಾಲಿ ಚಾಂಪಿಯನ್ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಮೊದಲ ಗೇಮ್ ಸೋಲಿನಿಂದ ಚೇತರಿಸಿಕೊಂಡು ದ.ಕೊರಿಯಾದ ಡಾಂಗ್ ಕೆವುನ್ ಲೀ ಅವರನ್ನು 12-21, 21-16, 21-18 ಅಂತರದಿಂದ ಸೋಲಿಸಿದರು. ಲೀ ವಿರುದ್ಧ ಆಡಿದ್ದ 3ನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿರುವ ಶ್ರೀಕಾಂತ್ ಕ್ವಾ.ಫೈನಲ್‌ನಲ್ಲಿ ಜಪಾನ್‌ನ ಕೆಂಟೊ ಮೊಮೊಟಾರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.
Next Story





