ಫಿಫಾ ರ‍್ಯಾಂಕಿಂಗ್: ಬೆಲ್ಜಿಯಂ ನಂ.1
ಝೂರಿಕ್, ಅ.25: ವಿಶ್ವ ಚಾಂಪಿಯನ್ ಫ್ರಾನ್ಸ್ ತಂಡವನ್ನು 2ನೇ ಸ್ಥಾನಕ್ಕೆ ತಳ್ಳಿದ ಬೆಲ್ಜಿಯಂ ತಂಡ ಗುರುವಾರ ಇಲ್ಲಿ ಬಿಡುಗಡೆಯಾದ ಫಿಫಾ ವಿಶ್ವ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದೆ. ಈ ತಿಂಗಳು ಎರಡು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಬೆಲ್ಜಿಯಂ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದಿದೆ.
ಕಳೆದ ತಿಂಗಳು ಬಿಡುಗಡೆಯಾದ ರ‍್ಯಾಂಕಿಂಗ್ ನಲ್ಲಿ ಬೆಲ್ಜಿಯಂ ಹಾಗೂ ಫ್ರಾನ್ಸ್ ಟೈ ಸಾಧಿಸಿದ್ದವು. ಉಭಯ ತಂಡಗಳು ಅಕ್ಟೋಬರ್‌ನಲ್ಲಿ ಒಂದು ಪಂದ್ಯದಲ್ಲಿ ಜಯ ಹಾಗೂ ಮತ್ತೊಂದರಲ್ಲಿ ಡ್ರಾ ಸಾಧಿಸಿವೆ. 1,773 ಅಂಕ ಗಳಿಸಿರುವ ಬೆಲ್ಜಿಯಂ ತಂಡ ಫ್ರಾನ್ಸ್ ಗಿಂತ(1732) ಒಂದು ಅಂಕದಿಂದ ಮುಂದಿದೆ.
►ಫಿಫಾ ರ‍್ಯಾಂಕಿಂಗ್:1.ಬೆಲ್ಜಿಯಂ, 2. ಫ್ರಾನ್ಸ್, 3. ಬ್ರೆಝಿಲ್, 4. ಕ್ರೊಯೇಶಿಯ,5. ಇಂಗ್ಲೆಂಡ್, 6. ಉರುಗ್ವೆ, 7.ಪೋರ್ಚುಗಲ್, 8. ಸ್ವಿಟ್ಜ ರ್ಲೆಂಡ್, 9. ಸ್ಪೇನ್, 10. ಡೆನ್ಮಾರ್ಕ್.
Next Story





