ಉಪ್ಪಿನಂಗಡಿ: ಸರಣಿ ಅಪಘಾತ; ವಿದ್ಯಾರ್ಥಿಗಳು ಸಹಿತ ಹಲವು ಮಂದಿಗೆ ಗಾಯ
ಉಪ್ಪಿನಂಗಡಿ, ಅ. 26: ಇಲ್ಲಿನ ಇಳಂತಿಲ ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ವಿದ್ಯಾರ್ಥಿಗಳು ಸಹಿತ ಹಲವರಿಗೆ ಗಾಯಗಳಾಗಿವೆ.
ಉಪ್ಪಿನಂಗಡಿ ಸಮೀಪದ ಇಳಂತಿಲ ಕ್ರಾಸ್ ಬಳಿ ಕಾರು, ರಿಕ್ಷಾ, ಪಿಕಾಪ್ ಹಾಗೂ ಎರಡು ಖಾಸಗಿ ಬಸ್ ಗಳ ನಡುವೆ ಸರಣಿ ಅಪಘಾತ ನಡೆದಿದೆ. ಎಲ್ಲಾ ವಾಹನಗಳು ಕಲ್ಲೇರಿ ಕಡೆಯಿಂದ ಉಪ್ಪಿನಂಗಡಿ ಕಡೆ ಆಗಮಿಸುವಾಗ ಅಪಘಾತಕ್ಕೆ ಸಿಲುಕಿಕೊಂಡಿವೆ. ವಾಹನದಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story