ಐಎನ್‌ಎಫ್ ಒಪ್ಪಂದ ಉಳಿಸಿಕೊಳ್ಳಲು ರಶ್ಯ ಉತ್ಸುಕ

ವಿಶ್ವಸಂಸ್ಥೆ, ಅ. 26: ಮಧ್ಯಮ ವ್ಯಾಪ್ತಿಯ ಪರಮಾಣು ಅಸ್ತ್ರಗಳ ಒಪ್ಪಂದ (ಐಎನ್‌ಎಫ್)ವನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ ರಶ್ಯದ ಕರಡು ನಿರ್ಣಯವೊಂದನ್ನು ತಡೆಯಲು ಅಮೆರಿಕ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಗುರುವಾರ ಪ್ರಯತ್ನಿಸಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಈ ಒಪ್ಪಂದದಿಂದ ಹೊರಬರುವ ಇಚ್ಛೆಯನ್ನು ಅಮೆರಿಕ ಈಗಾಗಲೇ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ಈ ವಿನಾಶಕಾರಕ ಸ್ಥಿತಿಗೆ ಪ್ರತಿಕ್ರಿಯಿಸುವ ಬದ್ಧತೆಯನ್ನು ಅಂತಾರಾಷ್ಟ್ರೀಯ ಸಮುದಾಯ ಹೊಂದಿದೆ’’ ಎಂದು ರಶ್ಯ ರಾಜತಾಂತ್ರಿಕರೊಬ್ಬರು ಹೇಳಿದರು.
‘‘ವಿಶ್ವಸಂಸ್ಥೆಯ ಮಹಾಧಿವೇಶನ ಅನುಮೋದಿಸಿದ ಸರಣಿ ನಿರ್ಣಯಗಳಿಂದ ಈ ಕರಡು ನಿರ್ಣಯವನ್ನು ಆರಿಸಲಾಗಿದೆ ಹಾಗೂ ಒಪ್ಪಂದದ ಅಗತ್ಯವನ್ನು ಇದು ಒತ್ತಿಹೇಳುತ್ತದೆ’’ ಎಂದರು.
Next Story





