ತಾಲಿಬಾನ್ ನಾಯಕನನ್ನು ಬಿಡುಗಡೆ ಮಾಡಿದ ಪಾಕ್

ಇಸ್ಲಾಮಾಬಾದ್, ಅ. 26: ಎಂಟು ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಉನ್ನತ ತಾಲಿಬಾನ್ ಕಮಾಂಡರೊಬ್ಬನನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ ಎಂದು ಮೂಲಗಳು ಗುರುವಾರ ಹೇಳಿವೆ.
ಅಮೆರಿಕ ಮತ್ತು ತಾಲಿಬಾನ್ ನಡುವಿನ ಮಾತುಕತೆಗಳಿಗೆ ಪೂರಕ ವಾತಾವರಣ ಕಲ್ಪಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಬಿಡುಗಡೆಗೊಂಡ ಅಬ್ದುಲ್ ಘನಿ ಬರಾದರ್ ತಾಲಿಬಾನ್ ಸ್ಥಾಪಕ ಮುಲ್ಲಾ ಉಮರ್‌ನ ಬಲಗೈ ಬಂಟನಾಗಿದ್ದನು.
ಅಫ್ಘಾನ್ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ತಾಲಿಬಾನ್‌ನ ಪ್ರತಿನಿಧಿಗಳನ್ನು ಅಮೆರಿಕ ಪ್ರತಿನಿಧಿ ಝಲ್ಮಾಯ್ ಖಲೀಲ್‌ಝಾದ್ ಕತರ್‌ನಲ್ಲಿ ಭೇಟಿಯಾದ ಎರಡು ವಾರಗಳ ಬಳಿಕ ಬರಾದರ್‌ನನ್ನು ಬಿಡುಗಡೆಗೊಳಿಸಲಾಗಿದೆ.
Next Story





